ಮಡಿಕೇರಿ, ಜು. 12: ಇಲ್ಲಿನ ಸಂತ ಮೈಕಲ್ಲರ ವಿದ್ಯಾಸಂಸ್ಥೆಯಲ್ಲಿ ತಾ.13 ರಂದು (ಇಂದಿನಿಂದ) ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ ಕಟ್ಟಡದ ಆವರಣ ಹಾಗೂ ತರಗತಿ ಕೋಣೆಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು.

ಸಂತ ಮೈಕಲ್ಲರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಾನ್ ಸನ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಇದ್ದರು.