ಕರಿಕೆ, ಜು. 12 : ಇಲ್ಲಿಗೆ ಸಮೀಪದ ಚೆತ್ತುಕಾಯ ದೊಡ್ಡಚೇರಿ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಶನಿವಾರ ಸಂಜೆ ದೊಡ್ಡಚೇರಿಯಲ್ಲಿ ಹೆಬ್ಬಾವು ಇರುವುದಾಗಿ ಸ್ಥಳೀಯರು ‘ಶಕ್ತಿ’ಗೆ ಮಾಹಿತಿ ನೀಡಿದರು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಾಗ ಸ್ಥಳಕ್ಕಾಗಮಿಸಿದ ಕರಿಕೆ ಉಪ ವಲಯ ಅರಣ್ಯ ಸಿಬ್ಬಂದಿಗಳು ಸುಮಾರು ಮೂವತ್ತಾರು ಕೆ.ಜಿ.ತೂಕ ಇಪ್ಪತ್ತೊಂದು ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದು ಪಟ್ಟಿಘಾಟ್ ಮೀಸಲು ಅರಣ್ಯ ಕ್ಕೆ ಬಿಡಲಾಯಿತು.

- ಸುಧೀರ್ ಹೊದ್ದೇಟ್ಟಿ