ಸೋಮವಾರಪೇಟೆ, ಜು. 11: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಹಾಗೂ ಹಾನಗಲ್ಲು ಗ್ರಾಮದ ಯೋಧಾಭಿಮಾನಿ ಬಳಗದ ಆಶ್ರಯದಲ್ಲಿ ತಾ. 13ರಂದು(ನಾಳೆ) ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ತಾ. 13ರಂದು ಪೂರ್ವಾಹ್ನ 10 ಗಂಟೆಯಿಂದ ಶಿಬಿರ ನಡೆಯಲಿದೆ ಎಂದು ಕರವೇ ತಾಲೂಕು ಅಧ್ಯಕ್ಷ ದೀಪಕ್ ಹಾಗೂ ಯೋಧಾಭಿಮಾನಿ ಬಳಗದ ಕೃಷ್ಣ ತಿಳಿಸಿದ್ದಾರೆ.