ಕೂಡಿಗೆ, ಜು. 11: ಹಾರಂಗಿಯಲ್ಲಿರುವ ಮೀನುಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದಲ್ಲಿ ಈ ಸಾಲಿನಲ್ಲಿ ಜಿಲ್ಲೆಯ ರೈತರ ಬೇಡಿಕೆಯ ಅನುಗುಣವಾಗಿ ಕೇಂದ್ರದಲ್ಲಿ ಹೆಚ್ಚು ಮೀನು ಮರಿಗಳನ್ನು ಉತ್ಪಾದಿಸಿ ವಿತರಣೆ ಮಾಡಲಾಗುವುದು ಎಂದು ಹಾರಂಗಿ ಮೀನು ಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಎಂ. ಸಚಿನ್ ತಿಳಿಸಿದ್ದಾರೆ.

ಮೀನು ಕೃಷಿಕರಿಗೆ ಮಾಹಿತಿ ನೀಡುವ ಮೂಲಕ ಮಾತನಾಡಿದ ಅವರು, ಹಾರಂಗಿಯ ಕೇಂದ್ರದಲ್ಲಿ ಈಗಾಗಲೇ ಮಹಷೀರ್ ಮೀನು ಮರಿಗಳ ಜೊತೆಗೆ ಇತರೆ ಮೀನು ಮರಿಗಳಾದ ಸ್ವದೇಶಿ ತಳಿಗಳಾದ ಕಾಟ್ಲಾ, ರೋಹು, ಮೃಗಾಲ್ ಜೊತೆಗೆ ಸಾಮಾನ್ಯ ತಳಿಯ ಮೀನುಮರಿಗಳನ್ನು ಉತ್ಪತ್ತಿ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಮಡಿಕೇರಿ ಜಿಲ್ಲಾ ಕೇಂದ್ರದ ಶ್ರೇಣಿ-1ರ ಸಹಾಯಕ ನಿರ್ದೇಶಕಿ ದರ್ಶನ್, ಪೆÇನ್ನಂಪೇಟೆ ಸಹಾಯಕ ನಿರ್ದೇಶಕ ಮಹದೇವ ಸೇರಿದಂತೆ ಹಲವಾರು ಮೀನು ಕೃಷಿಕರು ಹಾಜರಿದ್ದರು.