ಗೋಣಿಕೊಪ್ಪಲು, ಜು.11: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಡಾವಣೆಗಳು ಸೇರಿದಂತೆ 6 ವಾರ್ಡ್‍ಗಳನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾರ್ಪಡಿಸ ಲಾಗಿದೆ. ಶನಿವಾರ ನಗರದ 5ನೇ ವಿಭಾಗದ ಅಚ್ಚಪ್ಪ ಲೇಔಟ್ ಹಾಗೂ 6ನೇ ವಿಭಾಗದ ಎಂ.ಎಂ.ಲೇಔಟ್ ಇದರ ಸಾಲಿಗೆ ಸೇರಿದೆ. ಈ ವಲಯದಲ್ಲಿ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನೆÀ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆ ಆಗಮಿಸಿದ ತಾಲೂಕು ತಹಶೀಲ್ದಾರ್ ನಂದೀಶ್ ಕುಮಾರ್, ಪೊನ್ನಂಪೇಟೆ ಕಂದಾಯ ಅಧಿಕಾರಿ ರಾಧಾಕೃಷ್ಣ, ಗೋಣಿಕೊಪ್ಪ ಗ್ರಾ.ಪಂ. ಪಿಡಿಒ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಈ ಭಾಗವನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾರ್ಪಡಿಸಿದ್ದಾರೆ.
ಸರ್ಕಾರದ ನಿಯಮಗಳನ್ನು ಮೀರಿ ಯಾರೂ ಕೂಡ ಮನೆಯಿಂದ ಹೊರಬರುವ ಹಾಗೂ ಹೊರ ಹೋಗುವ ಪ್ರಯತ್ನವನ್ನು ಮಾಡಬಾರದು; ಈ ಬಗ್ಗೆ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ನಂದೀಶ್ ಕುಮಾರ್ ಬಡಾವಣೆಯ ಜನರಿಗೆ ಕಠಿಣ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳು ತ್ತಿದೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಗ್ರಾಮ ಲೆಕ್ಕಿಗ ಮಂಜುನಾಥ್, ಯಶ್ವಂತ್,ಸುಚಿತ್ರ, ಗ್ರಾಮ ಸಹಾಯಕ ಸುನಿಲ್ ಪಂಚಾಯ್ತಿ ಸಿಬ್ಬಂದಿಗಳಾದ ನವೀನ್, ರಾಜು, ಅಂಗನವಾಡಿ ಕಾರ್ಯಕರ್ತೆ ಲತಾ, ಕಿರಿಯ ಆರೋಗ್ಯ ಸಹಾಯಕಿ ಶಿವಮ್ಮ, ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಸಂಘದ ವರಲಕ್ಷ್ಮಿ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಮೋದ್ ಗಣಪತಿ ಹಾಜರಿದ್ದರು. ಕಳೆದ ಕೆಲ ದಿನಗಳ ಹಿಂದೆ ಕೆಇಬಿ ಹಿಂಭಾಗ, ನೇತಾಜಿ ಬಡಾವಣೆ ಹಾಗೂ ಹರಿಶ್ಚಂದ್ರಪುರ, ಎಂ.ಎಂ. ಲೇಔಟ್‍ನ ಕೆಲವು ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಪರಿವರ್ತಿ ಸಲಾಗಿತ್ತು.