ಮಡಿಕೇರಿ, ಜು. 11: ತಾ.11 ರಂದು, ಒಟ್ಟು 44 ಮಂದಿ ಕೊರೊನಾ ರೋಗದಿಂದ ಗುಣಮುಖರಾಗಿದ್ದು ಜಿಲ್ಲೆಯ ಜನತೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಇದರಿಂದ ಒಟ್ಟು 62 ಮಂದಿ ಗುಣಮುಖರಾಗಿದ್ದು, ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ತಾ.11 ರಂದು 20 ಹೊಸ ಪ್ರಕರಣಗಳು ಕೂಡ ವರದಿಯಾಗಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಇದುವರೆಗೆ ಓರ್ವ ವ್ಯಕ್ತಿ ಮೃತಪಟ್ಟಿರುತ್ತಾರೆ.ತಾ.11 ರಂದು ವರದಿಯಾದ ಪ್ರಕರಣಗಳು ವೀರಾಜಪೇಟೆಯ ಶಾಂತಿನಗರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 67 ವರ್ಷದ ಪುರುಷ, 57 ವರ್ಷದ ಮಹಿಳೆ, 28 ವರ್ಷದ ಮಹಿಳೆ, 10 ಹಾಗೂ 7 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಬಡಾವಣೆಯ 86 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಆಸ್ಪತ್ರೆ ವಸತಿ ಗೃಹದ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 21 ವರ್ಷದ ಪುರುಷರೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿರುತ್ತದೆ. ಸೋಮವಾರಪೇಟೆ ತಾಲೂಕಿನ ನೇರಳೆ ಗ್ರಾಮದ ಜ್ವರ ಲಕ್ಷಣಗಳಿದ್ದ ಮತ್ತು ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ 26 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಎಂ.ಎಂ. ಲೇಔಟ್ ನ ಜ್ವರ ಲಕ್ಷಣಗಳಿದ್ದ 38 ವರ್ಷದ ಪುರುಷ ಹಾಗೂ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 34 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.. (ಮೊದಲ ಪುಟದಿಂದ) ಸೋಮವಾರಪೇಟೆ ತಾಲೂಕು ಕುಸುಬೂರು (ಹಳ್ಳದಿಣ್ಣೆ) ಗ್ರಾಮದ 41 ವರ್ಷದ ಪುರುಷ ಹಾಗೂ ಬೆಸೂರು ಗ್ರಾಮದ 30 ವರ್ಷದ ಪುರುಷರಿಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಇಬ್ಬರಿಗೂ ಸೋಂಕು ದೃಢಪಟ್ಟಿದೆ. ಬಳಗುಂದ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 41 ವರ್ಷದ ಪುರುಷ, ಶನಿವಾರಸಂತೆಯ ಗುಡುಗಳಲೆ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 32 ವರ್ಷದ ಪುರುಷರಿಗೆ ಸೋಂಕು ತಗುಲಿದೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮದ ಜ್ವರ ಲಕ್ಷಣಗಳಿದ್ದ 50 ವರ್ಷದ ಮಹಿಳೆಯೊಬ್ಬರಿಗೆ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ನೇತಾಜಿ ಲೇಔಟ್‍ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಗಳಾದ 21 ಮತ್ತು 48 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ನಗರದ ಭಗವತಿ ನಗರದ ನಿವಾಸಿ, ಖಾಸಗಿ ರೆಸಾರ್ಟ್‍ನಲ್ಲಿ ಉದ್ಯೋಗಿಯಾಗಿರುವ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಪೆÇಲೀಸ್ ವಸತಿ ಗೃಹದ 38 ವರ್ಷದ ಪುರುಷರೊಬ್ಬರಿಗೂ ಕೊರೊನಾ ತಗುಲಿದೆ.
ಜಿಲ್ಲೆಯಲ್ಲಿ ಹೊಸದಾಗಿ 10 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ
ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಲೇ ಔಟ್, ಎಂ.ಎಂ.ಲೇಔಟ್, ಕೆದಮುಳ್ಳೂರು ಗ್ರಾಮ, ಸೋಮವಾರಪೇಟೆಯ ನೇರಳೆ ಗ್ರಾಮ, ಕುಸಬೂರು (ಹಳ್ಳದಿಣ್ಣೆ),ಬೆಸೂರು, ಬಳಗುಂದ, ಗುಡುಗಳಲೆ, ಮಡಿಕೇರಿಯ ಭಗವತಿ ನಗರ, ಪೆÇಲೀಸ್ ವಸತಿ ಗೃಹ. ಜಿಲ್ಲೆಯಲ್ಲಿ ಪ್ರಸ್ತುತ 61 ನಿಯಂತ್ರಿತ ಪ್ರದೇಶಗಳಿವೆ.