ನಾಪೆÇೀಕ್ಲು, ಜು. 11: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆ ಪಕ್ಕದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಕಂಬ ಮತ್ತು ಕುಡಿಯರ ರಾಜು ಎಂಬವರ ಮನೆಗೆ ಕಾಡಾನೆಗಳ ಹಿಂಡು ಧಾಳಿ ನಡೆಸಿ ಮನೆಯ ಛಾವಣಿ ಹಾಗೂ ಅವರ ವ್ಯಾನ್‍ಗೂ ಹಾನಿಗೊಳಿಸಿದೆ.ಶುಕ್ರವಾರ ರಾತ್ರಿ 4 ರಿಂದ 5 ಕಾಡಾನೆಗಳ ಹಿಂಡು ಧಾಳಿ ಮಾಡಿ ನಷ್ಟಗೊಳಿಸಿರಬಹುದೆಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ. ಕಳೆದ ವಾರ ಗ್ರಾಮದ ಮಾದಂಡ ಉಮೇಶ್ ಬಿದ್ದಪ್ಪ ಅವರ ಬಾಳೆ ತೋಟ ಹಾನಿಗೊಳಿಸಿದ ಸಂದರ್ಭ ಅರಣ್ಯ ಇಲಾಖೆ ಕಾಡಾನೆಗಳ ಕಾರ್ಯಾಚರಣೆ ನಡೆಸಿದಾಗ ಒಂದು ಮರಿಯಾನೆ ಸೇರಿದಂತೆ 7 ಆನೆಗಳ ಹಿಂಡು ಇದ್ದ ಬಗ್ಗೆ ತಿಳಿದು ಬಂದಿತ್ತು.ಈ ಹಾನಿಯೊಂದಿಗೆ ಸುತ್ತª Àುುತ್ತಲಿನ ತೋಟಗಳಲ್ಲಿನ ಕಾಫಿ, ಬಾಳೆ, ಅಡಿಕೆ ಮರಗಳನ್ನು ಕಾಡಾನೆಗಳು ಧ್ವಂಸಗೊಳಿಸಿರುವ ಬಗ್ಗೆಯೂ ತಿಳಿದು ಬಂದಿದೆ. ಈ ಭಾಗದಲ್ಲಿ ಕಾಡಾನೆಗಳಿಂದ ಹೆಚ್ಚಿನ ತೊಂದರೆಯಾಗುತ್ತಿದ್ದು, ಬೆಳೆ ನಷ್ಟ ದೊಂದಿಗೆ ಪ್ರಾಣಾಪಾಯ ಸಂಭ ವಿಸುವ ಭೀತಿ ಮೂಡಿದೆ. ಆದ್ದರಿಂದ ಕಾಡಾನೆಗಳನ್ನು ಶಾಶ್ವತವಾಗಿ ಇಲ್ಲಿಂದ ಸ್ಥಳಾಂತರಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪಸಂರಕ್ಷಣಾಧಿಕಾರಿ ಸುರೇಶ್, ಸಿಬ್ಬಂದಿಗಳಾದ ಸೋಮಣ್ಣ ಗೌಡ, ಕಾಳೇಗೌಡ, ಮತ್ತಿತರರು ಭೇಟಿ ನೀಡಿ ಇಲಾಖೆಯಿಂದ ಪರಿಹಾರ ನೀಡುವದಾಗಿ ಭರವಸೆ ನೀಡಿದರು.

ರೈತ ಸಂಘ ಭೇಟಿ

ಕಾಡಾನೆ ಧಾಳಿಯಿಂದ ಹಾನಿಗೊಳಗಾದ ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆ ಶಾಲೆ, ರಾಜನ್ ಅವರ ಮನೆ, ಹಾಗೂ ಮಾದಂಡ ಉಮೇಶ್ ಅವರ ಬಾಳೆ ತೋಟಗಳಿಗೆ

(ಮೊದಲ ಪುಟದಿಂದ) ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗಣೇಶ್ ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಹಾನಿಗೊಳಗಾದ ಶಾಲಾ ಕಟ್ಟಡ, ರಾಜನ್ ಅವರ ಮನೆ, ರಾಜು ಅವರ ವಾಹನ, ಉಮೇಶ್ ಅವರ ಬಾಳೆತೋಟ ಸೇರಿದಂತೆ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು. ಶಾಲೆ ಆರಂಭಗೊಂಡರೆ ಶಾಲೆಗೆ ಆಗಮಿಸುವ ಮಕ್ಕಳಿಗೆ ಸೂಕ್ತ ಭದ್ರತೆ ಹಾಗೂ ವಾಹನದ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಾಲಂಗಾಲ ರೈತ ಸಂಘದ ಗ್ರಾಮಾಧ್ಯಕ್ಷ ಕರಿನೆರವಂಡ ಜಿತನ್, ರೈತ ಮುಖಂಡರಾದ ಕರಿನೆರವಂಡ ಪೆÇನ್ನಣ್ಣ, ಹರೀಶ್, ಮೇಚುರ ಮಹೇಶ್, ಸುನಿಲ್, ಮಧು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.