ಕೂಡಿಗೆ, ಜು. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಈಗಾಗಲೇ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ. ಅಪ್ಪಚ್ಚು ರಂಜನ್ ಅÀವರ ಸೂಚನೆ ಮೇರೆಗೆ ಇಂದಿನಿಂದ ಅಣೆಕಟ್ಟೆಗೆ ಬರುವ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಶೇ. 60 ಭಾಗವನ್ನು ಅಣೆಕಟ್ಟೆಯಲ್ಲಿ ಸಂಗ್ರಹಮಾಡಿಕೊಳ್ಳುವುದು, ಉಳಿದ ಶೇ.40ರಷ್ಟು ಭಾಗದ ನೀರನ್ನು ನದಿಗೆ ಹರಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಇಂದಿನಿಂದ ನದಿಗೆ ಅಣೆಕಟ್ಟೆಯಿಂದ ನೀರನ್ನು ಹರಿಸಲಾಗಿದೆ.ಶಾಸಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿ ವರ್ಗದವರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.ಹಾರಂಗಿ ಅಣೆಕಟ್ಟೆಗೆ ಕಳೆದ ವರ್ಷಕ್ಕಿಂತ ಬೇಗನೆ ಒಳಹರಿವಿನ ನೀರಿನ ಪ್ರಮಾಣ ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತು ಕೆಳಪ್ರದೇಶದ ಗ್ರಾಮಗಳಿಗೆ ಮತ್ತು ಕಾವೇರಿ - ಹಾರಂಗಿ ಸಂಗಮದ ಸ್ಥಳದಿಂದ ನೀರು ಬೇರೆ ಗ್ರಾಮಗಳಿಗೆ ನದಿಯ ನೀರು ತಳ್ಳಲ್ಪಡಲಿದೆ. ಅಲ್ಲದೆ, ಕಳೆದ ಎರಡು ವರ್ಷಗಳಲ್ಲಿ ಕುಶಾಲನಗರ ಸೇರಿದಂತೆ ಅನೇಕ ಗ್ರಾಮಗಳು ಜಲಾವೃತಗೊಂಡು ಅನೇಕ ನಷ್ಟ ಉಂಟಾಗಿತ್ತು. ಹಾಗಾಗಿ ಅಧಿಕಾರಿಗಳ ಸಭೆಯನ್ನು ಕರೆದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಅಣೆಕಟ್ಟೆಯ ಒಳಹರಿವಿನ ಪ್ರಮಾಣದ ಆಧಾರಿತÀವಾಗಿ ಮೊದಲು 200 ಕ್ಯೂಸೆಕ್ ನೀರನ್ನು ವಿದ್ಯುತ್ ಘಟಕ ಮೂಲಕ ನದಿಗೆ ಹರಿಸಲಾಗುತ್ತಿದೆ. ಒಳಹರಿವು 2888 ಕ್ಯೂಸೆಕ್ ಇದ್ದು, ಹಂತ ಹಂತವಾಗಿ ಒಳಹರಿವು ನೋಡಿಕೊಂಡು, ಮುಂಜಾಗ್ರತಾ ಕ್ರಮವಾಗಿ ಶೇ. 40% ನದಿಗೆ ಹರಿಸಲಾಗುತ್ತದೆ. -ಕೆ.ಕೆ.ಎನ್. ಶೆಟ್ಟಿ.