ಕೂಡಿಗೆ, ಜು. 10 : ರಾಜ್ಯ ಸರ್ಕಾರದಿಂದ 2019ನೇ ಸಾಲಿನಲ್ಲಿ ಮಳೆಯ ಆಧಾರಿತ ಮೆಕ್ಕೆಜೋಳ ಬೆಳೆದ ರೈತರಿಗೆ ಪೆÇ್ರೀತ್ಸಾಹ ಧನವನ್ನು ನೀಡಲು ಚಿಂತನೆ ನಡೆಸಿದ್ದು, ಈಗಾಗಲೇ ಕೃಷಿ ಇಲಾಖೆಯ ಮೂಲಕ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಜಮೀನಿನ ದಾಖಲೆಯನ್ನು ಸರಿಯಾಗಿ ಪರಿಶೀಲನೆ ಮಾಡದೆ. ಜಂಟಿ ಖಾತೆಯಲ್ಲಿ ನೊಂದಣಿ ಕೃಷಿ ಭೂಮಿಯನ್ನು ಹೊಂದಿದ್ದರೂ ಸಹ ಕೃಷಿ ಇಲಾಖೆ ಅನ್ಯಾಯ ಎಸಗಿದೆÉ ಎಂದು ಕುಶಾಲನಗರ ಹೋಬಳಿ ರೈತರು ಆರೋಪ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳದ ಬೆಳೆಯನ್ನು ಬೆಳೆಯಲಾಗಿದೆ ಇದರ ಮಾಹಿತಿಯನ್ನು ಕೃಷಿ ಇಲಾಖೆ, ಮತ್ತು ಕಂದಾಯ ಇಲಾಖೆಯವರು ಸಂಗ್ರಹಿಸಿಕೊಂಡಿರುತ್ತಾರೆ. ಆದರೆ ಈ ಪ್ರದೇಶದ ನೂರಾರು ರೈತರ ಹೆಸರುಗಳನ್ನು ಕೃಷಿ ಇಲಾಖೆಯ ಆ್ಯಪ್‍ನಲ್ಲಿ ನೋಂದಣಿ ಮಾಡಿದ್ದರೂ, ಸರಕಾರ ನೀಡುವ. ಪೆÇ್ರೀತ್ಸಾಹ ಧನ ದೊರಕುತ್ತಿಲ್ಲ ಎಂದು ಆರೋಪಿಸಿದ್ದಾರೆ.