ಮಡಿಕೇರಿ, ಜು. 10: ನಗರದ ಕೊಹಿನೂರು ರಸ್ತೆಯಲ್ಲಿ ಇಂದು ಸಂಜೆ ಮನರಂಜನೆ ನೀಡುವಂತಹ ದೃಶ್ಯವೊಂದು ಗೋಚರಿಸಿತು. ಇಲ್ಲಿನ ತಾಯರ್ ಎಂಬ ವ್ಯಕ್ತಿಯೋರ್ವ ಗೂಳಿಯೊಂದಿಗೆ ಯಾವದೇ ಭಯವಿಲ್ಲದೆ ಗೂಳಿಯ ಮೇಲೆ ಕುಳಿತು ಅದರ ಕೊಂಬುಗಳನ್ನು ಹಿಡಿದುಕೊಂಡು ಮಾತನಾಡುತ್ತಾ, ಮೈ ಸವರಿ ಅದರೊಂದಿಗೆ ಆಟವಾಡುತ್ತಾ ತನ್ನಲ್ಲಿರುವ ಪ್ರಾಣಿ ಪ್ರೀತಿಯನ್ನು ತೋರಿಸುತ್ತಿದ್ದನು. ಇದು ಅಲ್ಲಿ ನೆರೆದಿದ್ದವರಿಗೆ ಮನರಂಜನೆ ಹಾಗೂ ಆಶ್ಚರ್ಯವನ್ನು ನೀಡಿತು.
ವಿಶೇಷವೆಂದರೆ ಸಾಧಾರಣಾ ಗೂಳಿಯನ್ನು ಮುಟ್ಟುವದೆಂದರೆ ಸಾಹಸವೇ ಸರಿ. ಅದರಲ್ಲೂ ಯಾರದೋ ಗೂಳಿಯೊಂದಿಗೆ, ಗೂಳಿಯ ಮೇಲೆ ಕುಳಿತರೂ ಕೂಡ ಅದು ಕೋಪವನ್ನು ತೋರದೆ, ಆತನ ಮೇಲೆ ದಾಳಿ ಮಾಡದೆ, ತನ್ನ ಸಿಟ್ಟನ್ನು ತೋರದೆ ಸುಮ್ಮನಿದ್ದುದು ವಿಶೇಷವಾಗಿದೆ. ಈ ರೀತಿ ಒಡನಾಟವನ್ನು ಮಾಡಬೇಕೆಂದರೆ ಆ ವ್ಯಕ್ತಿಗೂ ಗೂಳಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಕೈಗನ್ನಡಿಯಾಗಿದೆ.
- ಗಿರೀಶ್ ಪರಪ್ಪು