ಮಡಿಕೇರಿ, ಜು. 10: ನಗರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷರಾಗಿ ನವೀನ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಿ.ಯು. ವಿಘ್ನೇಶ್, ಸಿ.ಆರ್. ರಕ್ಷಿತ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಂ ರೈ, ಕಾರ್ಯದರ್ಶಿಗಳಾಗಿ ಬಿ.ಪಿ. ದಿರನ್ ಮೊಣ್ಣಪ್ಪ, ಎನ್. ಜಗದೀಶ್ ಹಾಗೂ ಖಜಾಂಚಿಯಾಗಿ ಲಿಖಿತ್ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಅಲ್ಲದೆ ಒಂಬತ್ತು ಮಂದಿ ಸಮಿತಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.