ನಾಪೋಕ್ಲು, ಜು. 9: ಸಮೀಪದ ಯವಕಪಾಡಿ ಗ್ರ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಲ್ಲಿ ಅಡ್ಡಾಡುತ್ತಿದ್ದು ಫಸಲನ್ನು ಧ್ವಂಸಮಾಡುತ್ತಿವೆ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡಿದ್ದಾರೆ.
(ಮೊದಲ ಪುಟದಿಂದ) ಗ್ರಾಮದ ರೈತ ಮಾದಂಡ ಉಮೇಶ್ ಬಿದ್ದಪ್ಪ ಅವರ 2.5 ಎಕ್ರೆ ಕಾಫಿ ತೋಟದಲ್ಲಿನ ಫಸಲು ಹಾಗೂ ಬಾಳೆಯ ಗಿಡಗಳು ಧ್ವಂಸವಾಗಿವೆ.ಈ ವ್ಯಾಪ್ತಿಯಲ್ಲಿ 7-8 ಕಾಡಾನೆಗಳು ಪದೇಪದೇ ಧಾಳಿ ನಡೆಸುತ್ತಿದ್ದು, ಕೃಷಿಕರಿಗೆ ನಷ್ಟ ಉಂಟಾಗುತ್ತಿದೆ. ಸಂಬಂಧಿಸಿದವರು ನಷ್ಟ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಕಾರ್ಯಾಚರಣೆ : ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದು ಅಧಿಕಾರಿ ತಕ್ಷಣ ಸ್ಪಂದಿಸಿದ್ದಾರೆ.ಡಿಎಫ್ಒ ಪ್ರಭಾಕರನ್ ಆದೇಶದಂತೆ ರ್ಯಾಪಿಡ್ ಆಕ್ಷನ್ ಫೋರ್ಸ್, ಅರಣ್ಯ ಇಲಾಖೆ ಸಿಬ್ಬಂದಿಗಳು,ಗ್ರಾಮಸ್ಥರು ಒಟ್ಟಾಗಿ ಒಂದು ಮರಿಯಾನೆ ಸೇರಿದಂತೆ ಏಳು ಕಾಡಾನೆಗಳನ್ನು ಗುರುವಾರ ಬೆಳಗ್ಗಿನಿಂದಲೇ ಕಾರ್ಯಾಚರಿಸಿ ಕಾಡಿಗಟ್ಟಿದ್ದಾರೆ ಎಂದು ಸ್ಥಳೀಯರಾದ ಪಾಂಡಂಡ ನರೇಶ್ ತಿಳಿಸಿದ್ದಾರೆ.
-ದುಗ್ಗಳ