ಮಡಿಕೇರಿ, ಜು. 10: 2020-21ನೇ ಸಾಲಿನಲ್ಲಿ ಮೀನುಗಾರಿಗೆ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯ ವಲಯ ಯೋಜನೆಗಳ ಅಡಿಯಲ್ಲಿ ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ನಿಟಿನಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆಗಳು ಇಂತಿವೆ: ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ, ಮೀನು ಮರಿಗಳನ್ನು ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು. ಆಸಕ್ತ ಕೃಷಿಕರು ತಮ್ಮ ಬೇÉಡಿಕೆಯನ್ನು ಸಂಬಂದಪಟ್ಟ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಮೀನುಗಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ಘಟಕ ವೆಚ್ಚ ರೂ. 10,000 ಗಳ ಉಚಿತ ವಿತರಣೆ ಮಾಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳನ್ನು ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಸಲ್ಲಿಸಬೇಕಾಗಿ ಕೋರಿದೆ.
ಮೀನು ಮಾರಾಟಗಾರರಿಗೆ ಮೀನು ಮಾರಾಟ ಮಾಡಲು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರವಾಹನ ಖರೀದಿಸಲು ಕ್ರಮವಾಗಿ ರೂ. 10,000, ರೂ. 30,000 ರೂ. 35000 ಸಹಾಯಧನ ವಿತರಣೆ. ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ಮೀನು ಮಾರಾಟಗಾರರು ಅಗತ್ಯ ದಾಖಲೆಗಳನ್ನು ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ -2 ಕಚೇರಿಗಳಲ್ಲಿ ಸಲ್ಲಿಸಬೇಕಾಗಿ ಕೋರಿದೆ.