ಮಡಿಕೇರಿ, ಜು. 9: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಕಳೆದ ವರ್ಷ ಪ್ರವಾಹಕ್ಕೆ ಒಳಗಾಗಿದ್ದ ಪ್ರದೇಶಗಳಾದ ಬೇಗೂರು ಕೊಡ್ಲಿ, ಹೈಸೊಡ್ಲೂರು, ಬಿರುನಾಣಿ ಸೇತುವೆ, ಕೆ.ಕೆ.ಆರ್. ಸೇತುವೆ, ಶ್ರೀಮಂಗಲ ಹೋಬಳಿ ವ್ಯಾಪ್ತಿಗೆ ಗುರುವಾರ ಭೇಟಿ ನೀಡಿ ವೀಕ್ಷಿಸಿದರು.
ಗೋಣಿಕೊಪ್ಪ: ಈ ಭಾರಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಕಿರಿಯ ಅಧಿಕಾರಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಳೆ ಅಧಿಕ ಸಂದರ್ಭ ಮುಂಜಾಗ್ರತಾ ಕ್ರಮವಾಗಿ ರಾಫ್ಟಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಕುಟ್ಟ ಸಿಪಿಐ ರಾಮರೆಡ್ಡಿ ಅವರಿಗೆ ಸೂಚನೆ ನೀಡಿದರು. ಭೇಟಿಯ ವೇಳೆ ವೀರಾಜಪೇಟೆಯ ಡಿ.ವೈ.ಎಸ್.ಪಿ. ಜಯಕುಮಾರ್,ಕುಟ್ಟ ಸಿಪಿಐ ಪರಶಿವಮೂರ್ತಿ, ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್, ಗೋಣಿಕೊಪ್ಪ ಸಿಪಿಐ ರಾಮರೆಡ್ಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.