ಮಡಿಕೇರಿ, ಜು. 10: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಜಿಲ್ಲೆಯಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವ ಇರುತ್ತದೆ.
ತಾ. 10 ರ ಸಂಜೆಯಿಂದ ತಾ. 12ರ ಬೆಳಿಗ್ಗೆವರೆಗೆ ಯೆಲ್ಲೋ (64.5 ಮಿ.ಮೀ. ನಿಂದ 115.5. ಮಿ.ಮೀ. ವರೆಗೆ ಮಳೆ ಬೀಳುವ ಸಾಧ್ಯತೆ) ಮತ್ತು ತಾ. 12 ರ ಬೆಳಿಗ್ಗೆಯಿಂದ 13ರ ಬೆಳಿಗ್ಗೆವರೆಗೆ ಆರೆಂಜ್ (115.6 ಮಿ.ಮೀ.ನಿಂದ 204.4 ಮಿ.ಮೀ.ರವರೆಗೆ ಮಳೆ ಬೀಳುವ ಸಾಧ್ಯತೆ) ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟ್ರೋಲ್ ಫ್ರೀ ಸಂಖ್ಯೆ 24x7 ಕಂಟ್ರೋಲ್ ರೂಂ 08272- 221077 Whಚಿಣsಂಠಿಠಿ ಓo: 8550001077 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.