ಪೆರಾಜೆ, ಜು. 9: ಪೆರಾಜೆ ಗ್ರಾಮದ ನಜೀರಾ ಆವಾಜ್ ಕಾಲೋನಿಯ 45 ವರ್ಷ ಪ್ರಾಯದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಯ 6ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಪೈಕಿ ಪೆರಾಜೆಯ ಸೋಂಕಿತೆ ವ್ಯಕ್ತಿ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಾಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಜೀರಾ ಆವಾಜ್ ಕಾಲೋನಿ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಕೊಡಗು ಜಿಲ್ಲಾಡಳಿತ ಘೋಷಿಸಿದೆ.