ಸುಂಟಿಕೊಪ್ಪ,ಜು.9: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ. 25ರ ಅನುದಾನದಲ್ಲಿ ಮೀಸಲಿಟ್ಟ ಹಣದಲ್ಲಿನ ಸಿಂಥೆಟಿಕ್ ನೀರಿನ ಟ್ಯಾಂಕ್ ಅನ್ನು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದವರು ಗುಳುಂ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ. 25ರ ಅನುದಾನದಲ್ಲಿ ಫಲಾನುಭವಿಗಳಿಗೆ ಸಿಂಥೆಟಿಕ್ ನೀರಿನ ಟ್ಯಾಂಕನ್ನು ವಿತರಿಸಲಾಯಿತು. ಆದರೆ ಅದನ್ನು ಪಂಚಾಯಿತಿ ಸದಸ್ಯರಾಗಿದ್ದವರು ಹಿರಿಯ ಸದಸ್ಯನಾಗಿದ್ದು ಫಲಾನುಭವಿಗೆ 500 ರೂ ನೀಡಿ ನೀರಿನ ಟ್ಯಾಂಕ್‍ನ್ನು ತನ್ನ ಬಳಿ ಇಟ್ಟು ಕೊಂಡಿದ್ದುದು, ತಡವಾಗಿ ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿದೆ.

ಕೂಡಲೇ ಎಚ್ಚೆತ್ತುಕೊಂಡ ಪ್ರತಿನಿಧಿ ನೀರಿನ ಟ್ಯಾಂಕ್‍ನ್ನು ಫಲಾನುಭವಿಗೆ ಹಿಂತಿರುಗಿಸಿದ್ದಾನೆ. ಈ ಬಗ್ಗೆ ಈ ಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೇಣು ಗೋಪಾಲ್ ಪರಿಶೀಲಿಸಿ ಫಲಾನುಭವಿಯನ್ನು ವಿಚಾರಿಸಿ ಇದೀಗ ನೀರಿನ ಟ್ಯಾಂಕ್‍ನ್ನು ಪಂಚಾಯಿತಿ ವಶಕ್ಕೆ ಪಡೆದು ನಂತರ ಫಲಾನುಭವಿಗೆ ಹಿಂತಿರುಗಿಸಲಾಗಿದೆ.