ವೀರಾಜಪೇಟೆ, ಜು.9: ಕೊರೊನಾ ಸೋಂಕಿಗೆ ಜಾತಿ, ಮತ, ಬೇಧ, ಧರ್ಮ, ಪಂಕ್ತಿ ಯಾವುದೂ ಇಲ್ಲ. ಮೊದಲು ನಾವು ಜಾಗೃತರಾಗಿ ಎಲ್ಲರನ್ನು ಜಾಗೃತಗೊಳಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಇಲ್ಲಿನ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ವಿವಿಧ ಇಲಾಖೆಗಳಲ್ಲಿ ಕೊರೊನ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮುಂಜಾಗರು ಕ್ರಮವಾಗಿ ಆರ್‍ಸೆಲ್ಬಾ ಎಂಬ ಹೋಮಿಯೋಪತಿ ಮಾತ್ರೆಯನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ವಿವಿಧ ಇಲಾಖೆಗಳಲ್ಲಿ ಕೊರೊನ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮುಂಜಾಗರು ಕ್ರಮವಾಗಿ ಆರ್‍ಸೆಲ್ಬಾ ಎಂಬ ಹೋಮಿಯೋಪತಿ ಮಾತ್ರೆಯನ್ನು ವಿತರಿಸಿ ಮಾತನಾಡಿದ ಅವರು, ತಾಲೂಕು ಆಯುಷ್ ಅಧಿಕಾರಿ ಡಾ ಶ್ರೀನಿವಾಸ್ ಮಾತನಾಡಿ ಈ ಹೋಮಿಯೋಪತಿ ಮಾತ್ರೆ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ, ತಿಂಗಳ ಮೂರು ದಿನ ಬೆಳಿಗ್ಗೆ ಖಾಲಿ ಹೊಟೆಯಲ್ಲಿ ಮಾತ್ರ ಸೇವಿಸಬೇಕು. ಮಾತ್ರೆ ಸೇವಿಸಿದ ನಂತರ 2 ಗಂಟೆಗಳ ಕಾಲ ಯಾವುದೇ ಆಹಾರವನ್ನು ತೆಗದುಕೊಳ್ಳಬಾರದು. ಈ ಮಾತ್ರೆಯನ್ನು 3 ವರ್ಷದಿಂದ ಮೇಲ್ಪಟ್ಟವರು ಯಾರೂ ಬೇಕಾದರೂ ತೆಗದುಕೊಳ್ಳಬಹುದು. ಅಸ್ತಮಾ, ಮಧುಮೇಹ, ರಕ್ತದೊತ್ತಡ ಇರುವವರು ಅವರ ನಿತ್ಯದ ಮಾತ್ರೆಯೊಂದಿಗೆ ಸೇವಿಸಬಹುದು ಎಂದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.