ಶನಿವಾರಸಂತೆ, ಜು. 10: ಶನಿವಾರಸಂತೆ ಹೋಬಳಿಯ ಶಿವಾರಳ್ಳಿ ಗ್ರಾಮದಲ್ಲಿ ಗದ್ದೆಯ ಕೃಷಿಹೊಂಡದಲ್ಲಿ ತಾ. 9 ರಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ರೈತ ಕುಶಾಲಪ್ಪ (37) ಮೃತಪಟ್ಟಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ, ಠಾಣಾಧಿಕಾರಿ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ಕುಶಾಲಪ್ಪ ಅವರ ಪತ್ನಿ 1 ತಿಂಗಳ ಹಿಂದೆ ಮೃತಪಟ್ಟಿದ್ದು, 1 ತಿಂಗಳ ಮಗುವಿದೆ, ಇಂದು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹ ಪರಿಶೀಲನೆ ನಡೆಸಲಾಗಿ, ಸಹಾಯಕ ಠಾಣಾಧಿಕಾರಿ ಶಿವಲಿಂಗ ಪ್ರಕರಣ ದಾಖಲಿಸಿದ್ದಾರೆ.