ಮಡಿಕೇರಿ, ಜು.8: ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜನಪರ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಮಡಿಕೇರಿ ನಗರ ಚೇಂಬರ್ ಅಧ್ಯಕ್ಷ ಎಂ.ಧನಂಜಯ್, ಪ್ರಕೃತಿ ವಿಕೋಪ ಮತ್ತು ಕೊರೊನಾ ಲಾಕ್‍ಡೌನ್ ದಿನಗಳಲ್ಲಿ ಕೊಡಗಿನಲ್ಲಿ ಅತ್ಯುತ್ತಮವಾಗಿ ದಕ್ಷತೆಯಿಂದ ಕರ್ತವ್ಯ ಸಲ್ಲಿಸಿದ ಡಾ.ಸುಮನ್ ಪನ್ನೇಕರ್ ಅವರ ಸೇವಾ ಮನೋಭಾವವನ್ನು ಕೊಡಗಿನ ಜನತೆ ಎಂದಿಗೂ ಮರೆಯಲಾರರು. ಲಾಕ್‍ಡೌನ್ ದಿನಗಳಲ್ಲಿ ಮಡಿಕೇರಿ ನಗರ ಚೇಂಬರ್‍ನ ಹಲವಾರು ಯೋಜನೆಗಳಲ್ಲಿ ಪೊಲೀಸರು ಕೈಜೋಡಿಸಿ ಜನರಿಗೆ ಸಹಕಾರಿಯಾದರು. ಮುಂದಿನ ಕರ್ತವ್ಯ ಅವಧಿಯ ದಿನಗಳಲ್ಲಿಯೂ ಡಾ.ಸುಮನ್ ಪನ್ನೇಕರ್ ಸೇವೆ ಸಮಾಜಕ್ಕೆ ಮತ್ತಷ್ಟು ಉತ್ತಮ ರೀತಿಯಲ್ಲಿ ದೊರಕಲಿ ಎಂದು ಅತ್ಯುತ್ತಮವಾಗಿ ದಕ್ಷತೆಯಿಂದ ಕರ್ತವ್ಯ ಸಲ್ಲಿಸಿದ ಡಾ.ಸುಮನ್ ಪನ್ನೇಕರ್ ಅವರ ಸೇವಾ ಮನೋಭಾವವನ್ನು ಕೊಡಗಿನ ಜನತೆ ಎಂದಿಗೂ ಮರೆಯಲಾರರು. ಲಾಕ್‍ಡೌನ್ ದಿನಗಳಲ್ಲಿ ಮಡಿಕೇರಿ ನಗರ ಚೇಂಬರ್‍ನ ಹಲವಾರು ಯೋಜನೆಗಳಲ್ಲಿ ಪೊಲೀಸರು ಕೈಜೋಡಿಸಿ ಜನರಿಗೆ ಸಹಕಾರಿಯಾದರು. ಮುಂದಿನ ಕರ್ತವ್ಯ ಅವಧಿಯ ದಿನಗಳಲ್ಲಿಯೂ ಡಾ.ಸುಮನ್ ಪನ್ನೇಕರ್ ಸೇವೆ ಸಮಾಜಕ್ಕೆ ಮತ್ತಷ್ಟು ಉತ್ತಮ ರೀತಿಯಲ್ಲಿ ದೊರಕಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುಮನ್ ಅವರು ಕೊಡಗಿನಲ್ಲಿ ತಾನು ಸಲ್ಲಿಸಿದ ಸೇವಾದಿನಗಳು ಸದಾ ಸ್ಮರಣೀಯವಾಗಿರುತ್ತದೆ. ಕೊಡಗಿನ ಜನರು ಮತ್ತು ಚೇಂಬರ್ ಆಫ್ ಕಾಮರ್ಸ್ ಸದಸ್ಯರು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರವನ್ನು ನೀಡುತ್ತಲೇ ಬಂದಿದ್ದಾರೆ. ಕೊಡಗಿನ ಜನರಿಗೆ, ವರ್ತಕರು ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರವನ್ನು ಪೊಲೀಸ್ ಇಲಾಖೆಗೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್‍ಅಂಬೆಕಲ್, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಅನ್ವೇಕರ್, ಉಪಾಧ್ಯಕ್ಷ ಅರವಿಂದ್ ಕೆಂಚಟ್ಟಿ, ಖಜಾಂಚಿ ಅಹಮ್ಮದ್ ಕಬೀರ್, ನಿರ್ದೇಶಕರುಗಳಾದ ಅನುರಾಗ್, ಸವಿತಾ ಅರುಣ್, ಬಿ.ಎಂ.ರಾಜೇಶ್ ಹಾಜರಿದ್ದರು.