ಶ್ರೀಮಂಗಲ, ಜು. 7: ಶ್ರೀಮಂಗಲ ಗ್ರಾ. ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ 34 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿರುವ ಹಿನ್ನೆಲೆ ಕುರ್ಚಿ ಗ್ರಾಮದಲ್ಲಿ ಸೋಂಕಿತ ಆಕೆಯ ತಂದೆಯ ಮನೆಯ ಸುತ್ತ 100 ಮೀಟರ್ ಅಂತರವನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಮಹಿಳೆಯ ಪತಿಯ ಮನೆ ಗೋಣಿಕೊಪ್ಪದ ಕೈಕೇರಿಯಲ್ಲಿದ್ದು, ಆಕೆಯ ಪತಿ ಹಾಗೂ ಮಗುವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಮಹಿಳೆಯ ತಂದೆ ಮತ್ತು ತಾಯಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಮಹಿಳೆ ಗರ್ಭಿಣಿಯಾಗಿದ್ದು, ಗೋಣಿಕೊಪ್ಪದ ಆಸ್ಪತ್ರೆಯಲ್ಲಿ ತಪಾಸಣೆಗೆ ತೆರಳುತ್ತಿದ್ದರು. ಹೆರಿಗೆಗೆ ಕೆಲವೇ ದಿನ ಇದ್ದುದ್ದರಿಂದ ಕೋವಿಡ್-19 ಸೋಂಕು ಪರೀಕ್ಷೆ ಮಾಡಿದ ಸಂದರ್ಭ ವರದಿ ಪಾಸಿಟಿವ್ ಬಂದಿದೆ. ಈಕೆಗೆ ಹೇಗೆ ಸೋಂಕು ತಗುಲಿರಬಹುದು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಂಟೈನ್‍ಮೆಂಟ್ ವಲಯ ಸ್ಥಳಕ್ಕೆ ತಹಶೀಲ್ದಾರ್ ನಂದೀಶ್, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶ್ರೀಮಂಗಲ ಕಂದಾಯ ಪರಿವೀಕ್ಷಕ ಸುಧೀಂದ್ರ, ಶ್ರೀಮಂಗಲ ಪಿ.ಡಿ.ಓ. ಸತೀಶ್ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.