ಕೂಡಿಗೆ, ಜು. 8: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿರುವ ಬ್ರಿಟಿಷರ ಕಾಲದ ಸೆರೆಮನೆ ಬಗ್ಗೆ ಕಾಡು ಪಾಲಾಗಿರುವ ಬ್ರಿಟಿಷರ ಕಾಲದ ಸೆರೆಮನೆ ಎಂಬ ವರದಿ ತಾ. 7 ರಂದು ಶಕ್ತಿಯಲ್ಲಿ ಪ್ರಕಟವಾಗಿತ್ತು. ಈ ವರದಿಗೆ ಕುಶಾಲನಗರ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ.ಪತ್ರಿಕೆ ವರದಿ ಆಧಾರದ ಮೇಲೆ ಇಂದು ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಕುಮಾರ್, ಹೆಬ್ಬಾಲೆ ವಿಭಾಗದ ಗ್ರಾಮ ಲೆಕ್ಕಾಧಿಕಾರಿ ಸಚಿನ್ ಸೇರಿದಂತೆ (ಮೊದಲ ಪುಟದಿಂದ) ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಜಾಗ ಮತ್ತು ಕಟ್ಟಡವನ್ನು ಕಾಡು ಕಡಿದು ಸ್ವಚ್ಛಗೊಳಿಸಿ ಸರಕಾರಿ ಕಾರ್ಯಕ್ರಮಗಳಿಗೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ವಿವಿಧ ತರಬೇತಿ ಮತ್ತು ಸಭೆಗಳಿಗೆ ಬಳಕೆ ಮಾಡಲಾಗುವುದು ಎಂದು ಕಂದಾಯ ಪರಿವೀಕ್ಷಕ ಮಧುಕುಮಾರ್ ತಿಳಿಸಿದ್ದಾರೆ.