ಗೋಣಿಕೊಪ್ಪಲು, ಜು. 8: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ಗೋಣಿಕೊಪ್ಪಲಿನ ಕಾಡ್ಯಮಾಡ ಗಿರೀಶ್ ಗಣಪತಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.2020 ಜನವರಿಯಿಂದ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷರಾಗಿದ್ದರು. ಇದನ್ನು ಮಾರ್ಪಡಿಸಿ ಕೆ.ಬಿ.ಗಿರೀಶ್ ಗಣಪತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಭೂ ಮಂಜೂರಾತಿ 2ರ ಪೀಠಾಧಿಕಾರಿ ಸಿ. ವಿಮಲಾ ಆದೇಶದಲ್ಲಿ ತಿಳಿಸಿದ್ದಾರೆ.ಜಿಲ್ಲಾ ಬಿಜೆಪಿ ವರ್ತಕ ಪ್ರಕೋಷ್ಠದ ಅಧ್ಯಕ್ಷರಾಗಿರುವ ಗಿರೀಶ್ ಗಣಪತಿ ಈ ಹಿಂದೆ ರಾಜ್ಯ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿ, ಗೋಣಿಕೊಪ್ಪಲು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿ,(ಮೊದಲ ಪುಟದಿಂದ) ತಾಲೂಕು ಬಿಜೆಪಿ ಘಟಕದ ಸದಸ್ಯರಾಗಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಅಲ್ಲದೆ ರಾಜ್ಯ ಎಫ್‍ಕೆಸಿಐ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಟೆಲಿಕಮ್ಯೂನಿಕೇಷನ್ ಜಿಲ್ಲಾ ನಿರ್ದೇಶಕರಾಗಿ, ರಾಜ್ಯ ವೈಲ್ಡ್ ಲೈಪ್ ಮಂಡಳಿಯ ಸದಸ್ಯರಾಗಿ, ಕೊಡಗು ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ, ಕೊಡಗು ವಾಣಿಜ್ಯ ವಿವಿಧೋದ್ದೇಶ ಸಂಘದ ನಿರ್ದೇಶಕರಾಗಿ, ಗೋಣಿಕೊಪಲು ಮರ್ಚೆಂಟ್ ಬ್ಯಾಂಕಿನ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿರುವ ಪಕ್ಷ ಶಾಸಕ ಕೆ.ಜಿ. ಬೋಪಯ್ಯ ಅವರ ಸೂಚನೆಯಂತೆ ಗಿರೀಶ್ ಗಣಪತಿಯವರನ್ನು ನೇಮಕಮಾಡಿದೆ.