ಪೆರಾಜೆ, ಜು. 7: ಈ ಹಿಂದೆ ಪಂಚಾಯತ್ ಸಿಬ್ಬಂದಿಯಾಗಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಗ್ರಾಮದಲ್ಲಿ ಸಲ್ಲಿಸಿದ ಸುಧೀರ್ಘ ಸೇವೆಯನ್ನು ಗುರುತಿಸಿ ಪೆರಾಜೆ ಗ್ರಾಮದ ಬಾಳೆಕಜೆ ಬಾಲಕೃಷ್ಣ ಅವರನ್ನು ಪೆರಾಜೆ ಗ್ರಾ.ಪಂ.ನಿಂದ ಸನ್ಮಾನಿಸಲಾಯಿತು. ಅವರು ಚೇರಂಬಾಣೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದು, ಇತ್ತೀಚೆಗೆ ನಿವೃತ್ತರಾದರು.
ಸನ್ಮಾನ ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ, ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವಪ್ರಭು, ಪಂಚಾಯತ್ ಕಾರ್ಯದರ್ಶಿ ಕುಮಾರ್ ಸೇರಿದಂತೆ ಪಂಚಾಯತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.