ಸಿದ್ದಾಪುರ, ಜು. 8: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೆಟ್ಟದಕಾಡು ಭಾಗದಲ್ಲಿ ವ್ಯಕ್ತಿಯೋರ್ವನಿಗೆ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಟ್ಟದಕಾಡು ಭಾಗದಲ್ಲಿ ನಿಬರ್ಂಧಿತ ಪ್ರದೇಶ ಎಂದು ಘೋಷಿಸಲಾಗಿತ್ತು. ನಿಬರ್ಂಧಿತ ಪ್ರದೇಶದ ನಿವಾಸಿಗಳಿಗೆ ಬುಧವಾರದಂದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಅಶ್ರಫ್ ಎಂಬವರು ಒಂದು ಕುಟುಂಬಕ್ಕೆ ತಲಾ 10 ಕೋಳಿ ಮೊಟ್ಟೆಗಳನ್ನು ವಿತರಿಸಿದರು. ಸಿದ್ದಾಪುರದ ಇಟ್ಟಿಗೆ ಉದ್ಯಮಿ ಥೋಮಸ್ ಹಾಗೂ ಗೆಳೆಯರು ನೂರಾರು ಕುಟುಂಬಗಳಿಗೆ ಕೋಳಿ ಮಾಂಸವನ್ನು ವಿತರಿಸಿದರು. ಈ ಸಂದರ್ಭ ಬೆಟ್ಟದಕಾಡು ಭಾಗದ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಅನ್ನಮ್ಮ, ಮರಿಯ ಹಾಜರಿದ್ದರು.