ಪೆÇನ್ನಂಪೇಟೆ, ಜು. 8: ಮಾಸ್ಕ್ ಧರಿಸಿರುವ ಮನುಷ್ಯನ ಚಿತ್ರದೊಂದಿಗೆ ಮಾಸ್ಕ್ ಧರಿಸಿ, ನೀವೂ ಬದುಕಿ, ನಿಮ್ಮವರನ್ನು ಬದುಕಿಸಿ... ಎಂಬ ಘೋಷಣಾ ವಾಕ್ಯವನ್ನು ಪೆÇನ್ನಂಪೇಟೆ ಬಸ್ ನಿಲ್ದಾಣದ ಗೋಡೆ ಮೇಲೆ ಬರೆಯುವ ಮೂಲಕ ಪೆÇನ್ನಂಪೇಟೆ ತೊರೆಬೀದಿ ನಿವಾಸಿ ಕಲಾವಿದ ಗಣಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪಟ್ಟಣದ ವಿವಿಧ ಕಡೆ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸುವ ಚಿತ್ರ ಬರೆಯುವ ಅಭಿಲಾಷೆಯನ್ನು ವ್ಯಕ್ತಪಡಿಸಿರುವ ಅವರು, ಈ ಹಿಂದೆ ಗೋಣಿಕೊಪ್ಪ ಪೆÇನ್ನಂಪೇಟೆ ಸೇರಿದಂತೆ ವಿವಿಧ ಕಡೆ ರಸ್ತೆಯ ಮೇಲೆ ಕೊರೊನಾ ವೈರಸ್‍ನ ಚಿತ್ರ ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.
-ಚನ್ನನಾಯಕ