ಮಡಿಕೇರಿ, ಜು. 8: ಕೊಡಗು ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷ ರಾಬಿನ್ ನೇಮಕಗೊಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ ಟಿ.ವಿ. ಕಿಶೋರ್ಕುಮಾರ್, ವಿ.ಕೆ. ಲೋಕೇಶ್, ಭರತ್ ಎಸ್.ಬಿ., ಬಿ.ಕೆ. ಅರುಣ್ಕುಮಾರ್, ಮಹೇಶ್ಗಣಪತಿ, ಉಷಾ ತೇಜಸ್ವಿ, ತೀತಿರ ಊರ್ಮಿಳಾ, ಉಷಾ ದೇವಮ್ಮ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್.ಎಂ. ರವಿ ಕಾಳಪ್ಪ, ಅರುಣ್ ಭೀಮಯ್ಯ, ಹೆಚ್.ಕೆ. ಮಾದಪ್ಪ, ಕಾರ್ಯದರ್ಶಿಗಳಾಗಿ ಕಿಲನ್ ಗಣಪತಿ, ರಾಯ್ತಮ್ಮಯ್ಯ, ಪೂಣಚ್ಚ ಮಲ್ಲಮಾಡ, ರೂಪಾ ಸತೀಶ್, ಸತೀಶ್ ಎಸ್.ಸಿ, ರಮಾದೇವಿ ಕಳಗಿ, ಪಿ.ಎಂ. ವಿಜಯ, ಪುಷ್ಪ ನಾಗೇಶ್, ಕಾರ್ಯಾಲಯ ಕಾರ್ಯದರ್ಶಿಯಾಗಿ ಎನ್.ಜಿ. ಜೀವನ್, ಖಜಾಂಜಿಯಾಗಿ ಚೆಪ್ಪುಡಿರ ಎ. ಮಾಚಯ್ಯ, ಮಾಧ್ಯಮ ಪ್ರಮುಖ್ ಆಗಿ ಸುಬ್ರಮಣ್ಯ ಉಪಾಧ್ಯಾಯ, ಸಜೀಲ್ ಕೃಷ್ಣನ್, ಜಿಲ್ಲಾ ವಕ್ತಾರಕರರಾಗಿ ಮಹೇಶ್ಜೈನಿ, ಸಹ ವಕ್ತಾರಕರರಾಗಿ ಸುವಿನ್ಗಣಪತಿ, ದೀಪಕ್ ಬಿ.ಜೆ., ರೈತ ಮೋರ್ಚಾ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಯುವ ಮೋರ್ಚಾ ಅಧ್ಯಕ್ಷರಾಗಿ ದರ್ಶನ್ ಜೋಯಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶರೀನ್ ಸುಬ್ಬಯ್ಯ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ಆನಂದರಘು, ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷರಾಗಿ ಮಿಟ್ಟು ರಂಜಿತ್, ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಪ್ರತಾಪ್ ಶಾಂತಳ್ಳಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಹಕೀಂ ಚೆರ್ದು, ಇವರುಗಳನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ 61 ಮಂದಿ ಜಿಲ್ಲಾ ಸಮಿತಿ ಸದಸ್ಯರು, 15 ಮಂದಿ ವಿಶೇಷ ಆಹ್ವಾನಿತರನ್ನು ಆಯ್ಕೆ ಮಾಡಲಾಗಿದೆ.