ಭಾಗಮಂಡಲ, ಜು. 7: ತಲಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಗೆ ಒಳಪಡುವ ತಣ್ಣಿಮಾನಿ ಗ್ರಾಮದ ಹಕ್ಕಿಕಿಂಡಿ ಕಳ್ಳಬೇಟೆ ತಡೆ ಶಿಬಿರ ಬಳಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ಶೆಡ್ಡನ್ನು ಅರಣ್ಯ ಇಲಾಖಾ ಸಿಬ್ಬಂದಿ ತೆರವುಗೊಳಿಸಿದ್ದಾರೆ. ತಣ್ಣಿಮಾನಿ ಗ್ರಾಮದ ಸಾಬು ಎಂಬವರು ಅಕ್ರಮವಾಗಿ ರಾತೋರಾತ್ರಿ ನಿರ್ಮಿಸಿದ ಶೆಡ್ಡನ್ನು ಇಲಾಖಾ ಸಿಬ್ಬಂದಿಗಳಾದ ಎಂ.ಎ. ಆನಂದ, ಉಪವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಸತೀಶ್ ಕುಮಾರ್, ವೀಕ್ಷಕರಾದ ಕಿರಣ್, ಪ್ರಕಾಶ್, ಸುರೇಶ್, ದೇವಿಪ್ರಸಾದ್ ಹಾಜರಿದ್ದು, ಅಕ್ರಮವಾಗಿ ಆಗಬಹುದಾಗಿದ್ದ ಅರಣ್ಯ ಒತ್ತುವರಿಯನ್ನು ಮುಂಜಾಗ್ರತಾ ಕ್ರಮದಿಂದ ತಪ್ಪಿಸಿದ್ದಾರೆ.

- ಸುನಿಲ್