ಕೂಡಿಗೆ, ಜು. 6 : ಕೂಡಿಗೆ-ಕುಶಾಲನಗರ ರಾಜ್ಯ ಹೆದ್ದಾರಿ ಅಗಲೀಕರಣ ಕೆಲಸ ಕೆಲ ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಉಳಿದ ಭಾಗಗಳ ರಸ್ತೆ ಅಗಲೀಕರಣ ಮತ್ತು ರಸ್ತೆ ಬದಿಯ ಎರಡೂ ಕಡೆಗಳಿಗೆ ಕಾಂಕ್ರಿಟ್ ಹಾಕುವುದರ ಮೂಲಕ ಭರದಿಂದ ಸಾಗುತ್ತಿದೆ.
ಈ ರಸ್ತೆ ಕಾಮಗಾರಿಯು ರೂ. 9 ಕೋಟಿ ವೆಚ್ಚದಾಗಿದ್ದು ಕೂಡಿಗೆಯಿಂದ ಕುಶಾಲನಗರದವರೆಗೆ ಇರುವ ರಾಜ್ಯ ಹೆದ್ದಾರಿಯ ವಿಸ್ತೀರ್ಣದ ಅಗಲಿಕರಣ ಮತ್ತು ಅಪಘಾತದ ವಲಯ ಎಂದು ಗುರುತಿಸಲಾಗುತ್ತಿದೆ. ಕೆಲ ಸ್ಥಳಗಳಲ್ಲಿ ಮಧ್ಯಭಾಗದಲ್ಲಿ ರಸ್ತೆ ವಿಭಜಕ ಹಾಕಿ ಎಡ ಮತ್ತು ಬಲ ಭಾಗದಲ್ಲಿ ವಾಹನಗಳ ಚಾಲನೆಗೆ ಅನುವು ಮಾಡಿ ಕೊಡಲಾಗುತ್ತಿದೆ. ಶೇ. 80 ರಷ್ಟು ಕಾಮಗಾರಿ ಮುಗಿದಿದೆ. ಇದರ ಉಸ್ತುವಾರಿ ಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ.