ಕುಶಾಲನಗರ, ಜು. 6: ಹುಣ್ಣಿಮೆ ಅಂಗವಾಗಿ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ಕಾವೇರಿ ನದಿಗೆ 108ನೇ ಮಹಾ ಆರತಿ ನಡೆಯಿತು.

ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಅರ್ಚಕ ಕೃಷ್ಣಮೂರ್ತಿ ಭಟ್ ಕಾವೇರಿ ಸ್ತೋತ್ರ ಪಠಿಸುವುದರೊಂದಿಗೆ ನದಿಗೆ ಪೂಜೆ ಸಲ್ಲಿಸಿ ಮಹಾ ಆರತಿ ಬೆಳಗಲಾಯಿತು.