ನಾಪೆÇೀಕ್ಲು, ಜು. 6: ಜಗತ್ತೇ ಕೊರೊನಾ ಮಹಾಮಾರಿಯಿಂದ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸೋಮವಾರದ ಸಂತೆಯನ್ನು ರದ್ದು ಪಡಿಸಿದೆ. ಹಾಗೆಯೇ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಹಾಗೂ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹೊರಗಡೆ ಓಡಾಟ ನಡೆಸದಂತೆ ಸೂಚನೆ ನೀಡಿದೆ. ಆದರೆ ಈ ವ್ಯಾಪ್ತಿಯ ಜನಕ್ಕೆ ಇದ್ಯಾವುದೂ ತಲೆಗೆ ಹೊಕ್ಕಂತೆ ಕಾಣುತ್ತಿಲ್ಲ.
ಸಂತೆ ಇಲ್ಲದಿದ್ದರೂ ನಾಪೆÇೀಕ್ಲು ಪಟ್ಟಣದಲ್ಲಿ ಮಹಿಳೆಯರು, ವೃದ್ಧರು ಸೇರಿದಂತೆ ಹೆಚ್ಚಿನ ಜನ ಸೇರುವದರ ಮೂಲಕ ಹಬ್ಬದ ಸಂತೆಯನ್ನು ನೆನಪಿಸುವಂತಿತ್ತು. ಬಸ್‍ಗಳ ಓಡಾಟವಿಲ್ಲದಿದ್ದರೂ ಜನ ಸಿಕ್ಕ ಸಿಕ್ಕ ವಾಹನಗಳಲ್ಲಿ ನಾಪೆÇೀಕ್ಲು ಪಟ್ಟಣದತ್ತ ದೌಡಾಯಿಸಿದರು. ವಾಹನ ದಟ್ಟಣೆ ಕೂಡ ಹೆಚ್ಚಾಗಿದ್ದು, ರಸ್ತೆಯಲ್ಲಿ ಜನ ಓಡಾಡದ ಪರಿಸ್ಥಿತಿ ಕಂಡು ಬಂತು. ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್. ಕಿರಣ್ ಮಾಸ್ಕ್ ಧರಿಸದೆ ಹಾಗೂ ಹೆಲ್ಮೆಟ್ ಧರಿಸದೆ ಓಡಾಡುತ್ತಿರುವವರಿಗೆ ದಂಡ ವಿಧಿಸುವದರ ಮೂಲಕ ಬಿಸಿ ಮುಟ್ಟಿಸಿದರು.
ಸಂತೆಯಲ್ಲಿ ತರಕಾರಿ ವ್ಯಾಪಾರಕ್ಕೆ ಆಗಮಿಸಿದ ಎರಡು ಮೂರು ಅಂಗಡಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಮತ್ತು ಸಿಬ್ಬಂದಿಗಳು ದಂಡ ವಿಧಿಸಿ ತೆರವುಗೊಳಿಸಿದರು. -ಪ್ರಭಾಕರ್