ಕೂಡಿಗೆ, ಜು. 6: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೂಸೂರು ವ್ಯಾಪ್ತಿಯ ಭುವನಗಿರಿ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಹಾಲು ಉತ್ಪಾದಕ ರೈತರಿಗೆ ಕೊರೊನಾ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಹಾಲು ಉತ್ಪಾದಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯ ಕ್ರಮ, ಮತ್ತು ರೈತರು ಸಂಘಕ್ಕೆ ಹಾಲು ತಂದು ಹಾಕುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಂಘದ ಅಧ್ಯಕ್ಷ ಚಂದ್ರಶೇಖರ ತಿಳಿಸಿದರು. ಹಾಲು ಉತ್ಪಾದಕ ರೈತರು ತಮ್ಮ ಹಾಲಿನ ಕ್ಯಾನ್ ಬಗ್ಗೆ ಶುಚಿತ್ವ ಮತ್ತು ಸ್ಯಾನಿಟೈಸರ್ ಬಳಕೆ ಪ್ರಮುಖವಾದ ಅಂಶವಾಗಿರುತ್ತದೆ. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ರೈತರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಟಿ ಕೆ ಚಂದ್ರಶೇಖರ ನಿರ್ದೇಶಕರಾದ ಜಗದೀಶ್ ರಾಜು ಲಕ್ಷ್ಮಿ ಮ್ಮ ಕಾಳೇಗೌಡ ಟಿ ಕೆ ವಿಶ್ವನಾಥ್ ಸೇರಿದಂತೆ ಸರ್ವ ಸದಸ್ಯರು ಕಾರ್ಯದರ್ಶಿ ಹೆಚ್ ಎಂ ಬಸವರಾಜು ಇದ್ದರು.