ಪೆÇನ್ನಂಪೇಟೆ, ಜು. 6: ಪೆÇನ್ನಂಪೇಟೆ ತಾಲೂಕು ರಚನೆಯ ಕನಸು ಇದೀಗ ನನಸಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಣೆ ಮಾಡಿದ್ದ ನೂತನ ಪೆÇನ್ನಂಪೇಟೆ ತಾಲೂಕಿಗೆ ಹೋಬಳಿ ಮತ್ತು ಗಡಿಗಳನ್ನು ನಿರ್ಧರಿಸಿ ಇದೀಗ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.ಇದುವರೆಗೂ ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟ 4 ಹೋಬಳಿಗಳನ್ನು ಅಲ್ಲಿಂದ ಬೇರ್ಪಡಿಸಿ ನೂತನ ಪೆÇನ್ನಂಪೇಟೆ ತಾಲೂಕಿಗೆ ಸೇರಿಸಲಾಗಿದೆ. ಇದರಿಂದ ಈ ಭಾಗದ ಜನತೆಯ ಪ್ರತ್ಯೇಕ ತಾಲೂಕು ಕನಸು ಸಾಕಾರಗೊಂಡಂತಾಗಿದೆ. ಅಲ್ಲದೆ, ಇಲ್ಲಿನ ಜನತೆ ಜಾತಿ ಮತ್ತು ಪಕ್ಷಬೇದ ಮರೆತು ನಡೆಸಿದ ಸಂಘಟಿತ ಹೋರಾಟಕ್ಕೆ ಫಲ ದೊರೆತಿದೆ.. ನೂತನ ಪೆÇನ್ನಂಪೇಟೆ ತಾಲೂಕಿನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಇದೇ ತಿಂಗಳ 3 ರಂದು ಅಧಿಸೂಚನೆ ಹೊರಡಿಸಿರುವ ಸರ್ಕಾರ, ನೂತನ ತಾಲೂಕಿಗೆ ಸೇರಿರುವ ಪೆÇನ್ನಂಪೇಟೆ, ಬಾಳೆಲೆ, ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ವಿವರ ಮತ್ತು ನೂತನ ತಾಲೂಕು ಗಡಿ ವಿವರವನ್ನು ತಿಳಿಸಿದೆ. 4 ಹೋಬಳಿಗಳ ಒಟ್ಟು ಎಲ್ಲಾ 49 ಗ್ರಾಮಗಳು ನೂತನ ಪೆÇನ್ನಂಪೇಟೆ ತಾಲೂಕಿಗೆ ಅಧಿಕೃತವಾಗಿ ಸೇರ್ಪಡೆಯಾಗಿವೆ. ಈ ಪೈಕಿ ಪೆÇನ್ನಂಪೇಟೆ ಹೋಬಳಿಯ 18, ಬಾಳೆಲೆ ಹೋಬಳಿಯ 9, ಶ್ರೀಮಂಗಲ ಹೋಬಳಿಯ 12 ಮತ್ತು ಹುದಿಕೇರಿ ಹೋಬಳಿಯ 10 ಗ್ರಾಮಗಳು ಸೇರಿವೆ.
ನೂತನ ಪೆÇನ್ನಂಪೇಟೆ ತಾಲೂಕಿನ ಪೂರ್ವ ಭಾಗಕ್ಕೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಗಡಿ, ಪಶ್ಚಿಮ ಭಾಗಕ್ಕೆ ವೀರಾಜಪೇಟೆ ತಾಲೂಕು ಗಡಿ, ಉತ್ತರ ಭಾಗಕ್ಕೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಗಡಿ ಮತ್ತು ದಕ್ಷಿಣ ಭಾಗಕ್ಕೆ ಕೇರಳ ರಾಜ್ಯ ಗಡಿ ಇರುವುದಾಗಿ ಅಧಿಸೂಚನೆಯಲ್ಲಿ ಸರಕಾರ ಸ್ಪಷ್ಟಪಡಿಸಿದೆ.
ಪೆÇನ್ನಂಪೇಟೆ ಹೋಬಳಿಯ ಎಲ್ಲಾ ಗ್ರಾಮಗಳಾದ ಹಳ್ಳಿಗಟ್ಟು (ಹುದೂರು), ಅರವತ್ತೊಕ್ಲು (ಮುಗುಟಗೇರಿ), ಕುಟ್ಟಂದಿ (ಕೊಂಗಣ), ಬಿ.ಶೆಟ್ಟಿಗೇರಿ, ಕುಂದಾ, ಈಚೂರು, ಕೈಕೇರಿ (ಅತ್ತೂರು, ನಲ್ಲುಕೋಟೆ), ಹೆಬ್ಬಾಲೆ (ಭದ್ರಗೊಳ), ದೇವಮಚ್ಚಿ ಅರಣ್ಯ, ಅರಕೇರಿ ಅರಣ್ಯ-1, ಅರಕೇರಿ ಅರಣ್ಯ-2, ಅರಕೇರಿ ಅರಣ್ಯ-3, ನೊಕ್ಯ (ಸಿದ್ದಾಪುರ), ಮಾಯಮುಡಿ (ಬಾಳಾಜಿ), ಕಿರುಗೂರು, ಮತ್ತೂರು
(ಕೋಟೂರು) ಬೆಕ್ಕೆÉಸೊಡ್ಲೂರು ಮತ್ತು ಕಾನೂರು (ನಿಡುಗುಂಬ)ಇವು ನೂತನ ಪೆÇನ್ನಂಪೇಟೆ ತಾಲೂಕು ವ್ಯಾಪ್ತಿಗೆ ಒಳಪಡಲಿವೆÉ.
ಬಾಳೆಲೆ ಹೋಬಳಿಯ ಎಲ್ಲಾ ಗ್ರಾಮಗಳಾದ ಬಾಳೆಲೆ, ದೇವನೂರು, ಹತ್ತುಗಟ್ಟು ಅರಣ್ಯ, ನಿಟ್ಟೂರು, ಕೊಟ್ಟಗೇರಿ, ಬೆಸಗೂರು, ಬಿಳೂರು, ನಲ್ಲೂರು, ಧನುಗಾಲ(ರುದ್ರಬೀಡು), ಶ್ರೀಮಂಗಲ ಹೋಬಳಿಯ ಎಲ್ಲಾ ಗ್ರಾಮಗಳಾದ ಕುಮಟೂರು (ಶ್ರೀಮಂಗಲ), ನಾಲ್ಕೇರಿ, ಕೋತೂರು, ನಾಲ್ಕೇರಿ ಅರಣ್ಯ, ಬಾಡಗ, ಕುಟ್ಟ (ತೈಲ), ಮಂಚಳ್ಳಿ, ಕುರ್ಚಿ (ಬೀರುಗ), ಈಸ್ಟ್ ನೆಮ್ಮಲೆ, ವೆಸ್ಟ್ ನೆಮ್ಮಲೆ, ಟಿ.ಶೆಟ್ಟಿಗೇರಿ (ತಾವಳಗೇರಿ) ಮತ್ತು ಹರಿಹರ ನೂತನ ತಾಲೂಕು ವ್ಯಾಪ್ತಿಗೆ ಒಳಪಡಲಿವೆÉ.
ಹುದಿಕೇರಿ ಹೋಬಳಿಯ ಹುದಿಕೇರಿ (ಕೋಣಗೇರಿ), ಬೇಗೂರು (ಚೇಣಿವಾಡ), ಮುಗುಟಗೇರಿ (ನಡಿಕೇರಿ), ಚಿಕ್ಕಮುಂಡೂರು (ತೂಚಮಕೇರಿ), ಬಲ್ಯಮುಂಡೂರು, ಬೆಳ್ಳೂರು, ಹೈಸೊಡ್ಲುರು, ಬಾಡಗರಕೇರಿ (ಪೆÇರಾಡು), ತೆರಾಲು ಮತ್ತು ಪರಕಟಗೇರಿ (ಬಿರುನಾಣಿ) ಈ ಎಲ್ಲಾ ಗ್ರಾಮಗಳು ಇನ್ನು ಮುಂದೆ ಪೆÇನ್ನಂಪೇಟೆ ತಾಲೂಕಿನ ಭಾಗವಾಗಲಿವೆÉ ಎಂದು ಸರಕಾರದ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಈ ಹಿಂದೆ ಇದ್ದ 4 ಹೋಬಳಿಗಳು ಬೇರ್ಪಟ್ಟ ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಮತ್ತು ಅಮ್ಮತಿ ಹೋಬಳಿಗಳು ಮಾತ್ರ ಉಳಿದುಕೊಂಡಿದೆ. ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 59 ಗ್ರಾಮಗಳನ್ನು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಅಲ್ಲದೆ, 20 ಗ್ರಾಮ ಲೆಕ್ಕಾಧಿಕಾರಿಗಳ
(ಮೊದಲ ಪುಟದಿಂದ) ವೃತ್ತವನ್ನು ನಿಗದಿಪಡಿಸಲಾಗಿದೆ. ಅದರಂತೆ ವೀರಾಜಪೇಟೆ ಹೋಬಳಿಯಲ್ಲಿ ಚೆಂಬೆಬೆಳ್ಳೂರು, ಬಿಟ್ಟಂಗಾಲ, ಕಂಡಂಗಾಲ, ಬೇಟೋಳಿ, ಕೆದಮುಳ್ಳೂರು, ಕದನೂರು, ಬೆಳ್ಳುಮಾಡು ಮತ್ತು ಕಾಕೋಟುಪರಂಬು ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಎಂದು ತಿಳಿಸಲಾಗಿದೆ.
ಅಮ್ಮತ್ತಿ ಹೋಬಳಿಯಲ್ಲಿ ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಬಾಡಗ ಬಾಣಂಗಾಲ, ಮೇಕೂರು ಹೊಸ್ಕೇರಿ, ಹೊಸೂರು, ಕೆ.ಬೈಗೋಡು, ಬಿಳುಗುಂದ, ಕಾವಡಿ, ಹಾಲುಗುಂದ ಮತ್ತು ಕಣ್ಣಗಾಲವನ್ನು ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ವೀರಾಜಪೇಟೆ ತಾಲೂಕಿನ ಪೂರ್ವಕ್ಕೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಗಡಿ, ಪಶ್ಚಿಮಕ್ಕೆ ಮಡಿಕೇರಿ ತಾಲೂಕುಗಡಿ, ಉತ್ತರಕ್ಕೆ ಸೋಮವಾರಪೇಟೆ ತಾಲ್ಲೂಕು ಗಡಿ ಹಾಗೂ ದಕ್ಷಿಣಕ್ಕೆ ಕೇರಳ ರಾಜ್ಯ ಗಡಿ ಇರುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 6 ರಂತೆ ದಿನಾಂಕ 6-03-2020 ರಂದು ಪೆÇನ್ನಂಪೇಟೆ ನೂತನ ತಾಲೂಕು ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಿತು.ನಂತರ ದಿನಾಂಕ 19-3- 2020ರಂದು ಸರಕಾರ ಮತ್ತೊಂದು ಆದೇಶ ಹೊರಡಿಸಿ ಮುಂದಿನ 30 ದಿನಗೊಳಗಾಗಿ ಪೆÇನ್ನಂಪೇಟೆ ನೂತನ ತಾಲೂಕು ಗಡಿ ನಿಗದಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು.
ಈ ಅವಧಿಯಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಾಗಲಿ, ಸಲಹೆಗಳಾಗಲಿ ಬಂದಿರುವುದಿಲ್ಲ. ಆದ್ದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ-1964 ಸೆಕ್ಷನ್4(4)ರ ಅಧಿಕಾರದ ಅನ್ವಯ ನೂತನ ತಾಲೂಕಿನ ಕಂದಾಯ ವೃತ್ತ ಮತ್ತು ಗ್ರಾಮಗಳನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಾಜ್ಯಶ್ರೀ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
- ವರದಿ: ರಫೀಕ್ ತೂಚಮಕೇರಿ