ಮಡಿಕೇರಿ, ಜು. 5: ಕೊಡಗಿನ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದು ಆಯಾ ಮಸೀದಿಗಳ ಆಡಳಿತ ಮಂಡಳಿಯ ಪ್ರಮುಖರಿಗೆ ಬಿಟ್ಟ ವಿಚಾರವೆÀಂದು ಜಮಾಅತ್ ಒಕ್ಕೂಟಗಳ ಅಧ್ಯಕ್ಷ ಹನೀಫ್ ಅವರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು 14 ಮಸೀದಿಗಳ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರದ ಬದ್ರಿಯಾ ಮಸೀದಿ ಸಮಿತಿ ಹಾಗೂ ಜಾಮೀಯಾ ಮಸೀದಿ ಪ್ರಮುಖರು ಈಗಿನ ಪರಿಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಒಲವು ವ್ಯಕ್ತಪಡಿಸಿದೆ. ಕೆಲವರಷ್ಟೇ ಉತ್ಸುಕತೆ ತೋರಿರುವ ಕಾರಣ ಆಯಾ ಮಸೀದಿ ಆಡಳಿತ ಮಂಡಳಿ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಸರಕಾರದ ಆದೇಶ ಉಲ್ಲಂಘಿಸದೆ ಪ್ರಾರ್ಥನೆ ನಡೆಸಬಹುದು ಎಂದು ತೀರ್ಮಾನಿಸಿದ್ದಾಗಿ ಹನೀಫ್ ವಿವರಿಸಿದ್ದಾರೆ.
ಇಂದು ಈ ಸಂಬಂಧ ಸಭೆಯಲ್ಲಿ ಸಾಕಷ್ಟು ಚರ್ಚಿಸಿದ ಬಳಿಕ ಮೇಲಿನ ತೀರ್ಮಾನ ಕೈಗೊಂಡಿದ್ದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಬಹುತೇಕ ಧಾರ್ಮಿಕ ಮುಖಂಡರು ಸಾಮೂಹಿಕ ಪ್ರಾರ್ಥನೆಗೆ ಈ ಸಂದರ್ಭ ಒಲವು ನಿರಾಕರಿಸಿದ್ದಾಗಿ ವಿವರಿಸಿದ್ದಾರೆ.ಹೀಗಾಗಿ ತಾ. 7ರಿಂದ ಸಾಮೂಹಿಕ ಪ್ರಾರ್ಥನೆ ನಡೆಸುವುದು ಆಯಾ ಮಸೀದಿಗಳ ಮುಖ್ಯಸ್ಥರಿಗೆ ಬಿಟ್ಟ ವಿಚಾರವೆಂದು ಮತ್ತು ಪ್ರಾರ್ಥನೆ ನಡೆಸುವುದು ಕಡ್ಡಾಯವಾಗಿ ಜಿಲ್ಲಾಡಳಿತ ಹಾಗೂ ಸರಕಾರದ ಆದೇಶ ಪಾಲಿಸಬೇಕೆಂದು ಅವರು ನೆನಪಿಸಿದ್ದಾರೆ.
ಜಾಮೀಯಾ ಮಸೀದಿ
ಮಡಿಕೇರಿಯ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷ ಮಹಮದ್ ಇಮ್ರಾನ್ ತಿಳಿಸಿದ್ದಾರೆ.