ಶನಿವಾರಸಂತೆ, ಜೂ. 5: ಶನಿವಾರಸಂತೆ ಸಮೀಪದ ಶಿರಂಗಾಲ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಲಾಕ್‍ಡೌನ್ ಆಗಿದ್ದು, ಅಲ್ಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಯೊಬ್ಬರಿಗೆ ಕೊಡ್ಲಿಪೇಟೆ ಕಂದಾಯ ಅಧಿಕಾರಿ ಮನು ಪರೀಕ್ಷೆ ಬರೆಯಲು ಎಲ್ಲಾ ಸವಲತ್ತುಗಳನ್ನು ಒದಗಿಸಿದ್ದರು. ಪರೀಕ್ಷೆ ಪ್ರಾರಂಭದಿಂದ ಕೊನೆಯವರೆಗೂ ಆ ವಿದ್ಯಾರ್ಥಿನಿಗೆ ತನ್ನ ಸ್ವಂತ ಹಣವನ್ನು ನೀಡಿ ಆಟೋ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿದ್ದರು.