ವೀರಾಜಪೇಟೆ, ಜು. 5: ಜನಸಾಮಾನ್ಯರಿಗೆ ಒದಗಿಸುವ ಪ್ರಮುಖ ಮೂಲಭೂತ ಸೌಲಭ್ಯಗಳಲ್ಲಿ ಸಂಚಾರ ಮಾಡುವ ರಸ್ತೆಯು ಒಂದು. ಆದರೆ ದಶಕಗಳಿಂದ ಜನಪತ್ರಿನಿಧಿಗಳು ಮತ್ತು ಪಟ್ಟಣ ಪಂಚಾಯಿತಿಯು ರಸ್ತೆ ದುರಸ್ಥಿಗೆ ಮುಂದಾಗದೆ ಈ ಬಗ್ಗೆ ಕಡೆಗಾಣಿಸಲಾಗಿದೆ ಎಂದು ನೆಹರು ನಗರದ ನಿವಾಸಿಗಳು ಆರೋಪಿಸಿದ್ದಾರೆ.
ವೀರಾಜಪೇಟೆ ನಗರದ ಅತಿ ಹೆಚ್ಚು ಮತದಾರರು ಹೊಂದಿರುವ ಪ್ರದೇಶವಾದ ನೆಹರು ನಗರವು ಮೊಗರಗಲ್ಲಿ ಮುಖ್ಯ ಬೀದಿಯಿಂದ 1.5 ಕಿಮೀ ಅಂತರದ ಪ್ರಮುಖ ರಸ್ತೆ ಬೃಹತ್ ಹೊಂಡಗಳಿಂದ ಹದಗೆಟ್ಟು ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ನಡೆದಾಡಲು ಕಂಟಕವಾಗಿ ಪರಿಣಮಿಸಿದೆ. ಇತ್ತೀಚೆಗೆ ರಾಜ್ಯ ಅರೋಗ್ಯ ಸಚಿವ ಶ್ರೀರಾಮುಲು ಅವರು ಇದೇ ಗುಂಡಿಮಯ ರಸ್ತೆಯಲ್ಲಿ ಸಂಚಾರ ಮಾಡಿರುವುದು ಗಮನಾರ್ಹ ಸಂಗತಿ. 2018 ರ ಚುನಾವಣೆಯ ಸಂಧರ್ಭದಲ್ಲಿ ವಾರ್ಡ 7, ವಾರ್ಡ 8 ಮತ್ತು ವಾರ್ಡ 10 ಎಂದು ವಿಂಗಡಿಸಲಾಯಿತು. ಸುಮಾರು 2000 ಮತದಾರರು ಹೊಂದಿರುವ ನೆಹೆರುನಗರದಲ್ಲಿ ಒಟ್ಟು 650-700 ಮನೆಗಳಿವೆ, ಎರಡು ಅಂಗನವಾಡಿ ಕೇಂದ್ರಗಳು, 1 ಮಹಿಳಾ ಸಮಾಜ, 1 ಸಮುದಯ ಭವನ, 1 ನ್ಯಾಯಬೆಲೆ ಅಂಗಡಿ, 1 ಯುವಕ ಸಂಘ ಮತ್ತು ಪಲ್ಲಾಟ್ ಅಯ್ಯಪ್ಪ ಹಿಂದೂ ಧಾರ್ಮಿಕ ಕೇಂದ್ರ ಹಾಗೂ ಅಜ್ಜಾನಿ ಬೀಬಿ ದರ್ಗಾ ಮುಸ್ಲಿಂ ಧಾರ್ಮಿಕ ಕೇಂದ್ರಗಳಿವೆ. ಹಲವು ಸ್ತ್ರೀ ಶಕ್ತಿ ಸಂಘಗಳು ಕಾರ್ಯ ನೀರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ವಾಸಿಸುವ ಒಟ್ಟು ಶೇ. 90 ರಷ್ಟು ವಾಸಿಗಳು ಸಮಾನ್ಯ ವರ್ಗ ಮತ್ತು ದಿನ ಕೂಲಿ ಅವಲಂಬಿತರಾಗಿದ್ದಾರೆ, 30 ಮಂದಿ ಸ್ವತ: ಅಟೋ ರಿಕ್ಷ ಹೊಂದಿದವರಾಗಿದ್ದಾರೆ. ಸರ್ಕಾರದಿಂದ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುವ ಪಡಿತರ ಉಚಿತವಾದರು ಪಡಿತರ ವಸ್ತುಗಳು ಖರೀದಿಸಿ ಮನೆಗೆ ಹಿಂದಿರುಗಲು ಅಟೋಗಳಿಗೆ 100 ರೂ. ಎಂಬಂತಾಗಿದೆ. ಈ ಪ್ರದೇಶದ ಜನಸಾಮಾನ್ಯರು ಪಟ್ಟಣ ಸಂಚಾರಕ್ಕೆ ಹೆಚ್ಚಾಗಿ ಅಟೋಗಳನು ಬಳಕೆ ಮಾಡುವಂತವರಾಗಿದ್ದಾರೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಅಟೋಗಳಿಗೆ ದುಬಾರಿ ಬೆಲೆ ನೀಡಬೇಕು ಅಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸಲು ನಿಗದಿತ ಹಣ 30 ರೂ ಇದಲ್ಲಿ ನೆಹರುನಗರಕ್ಕೆ ತೆರಳಲು 80-100 ರೂ ನೀಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಟೋಗಳು ನೆಹರುನಗರಕ್ಕೆ ಬರಲು ಹಿದೇಟು ಹಾಕುತಿದ್ದಾರೆ. ಕಾರಣ ಕೇಳಿದರೆ ಒಂದು ಭಾರಿ ಬಂದರೆ ದುರಸ್ತಿಗೆ ಹೊಗುವುದು ಶತಸಿದ್ದ ಎಂದು ರವಿ ನಾರಾಯಣ್ ಅವರು ಹೇಳುತ್ತಾರೆ.
ಪಟ್ಟಣ ಪಂಚಾಯಿತಿ ಕಛೇರಿಯು ರಸ್ತೆಯನ್ನು ಮತ್ತು ನಮ್ಮನ್ನು ಕಡೆಗಣಿಸಿದೆ ಎಂದು ಅಕ್ರೋಶದಿಂದ ಹೇಳುತ್ತಾರೆ ಇಲ್ಲಿನ ನಿವಾಸಿ ಅಗಸ್ಟೀನ್ ಕ್ಸೆವೀಯರ್.
ನೆಹೆರು ನಗರಕ್ಕೆ ತೆರಳುವ ಪ್ರಮುಖ ರಸ್ತೆಯನ್ನು ಅತಿ ಶಿಘ್ರದಲ್ಲಿ ದುರಸ್ತಿಗೊಳಿಸಿ, ಮುಂದಿನ 15 ದಿನದ ಗಡವು ನೀಡುತಿದ್ದೇವೆ ತಪ್ಪಿದಲ್ಲಿ ನೆಹರುನಗರದ ಸರ್ವ ನಿವಾಸಿಗಳು ಸಂಘ ಸಂಸ್ಥೆಗಳ ಅಶ್ರಯದಲ್ಲಿ ಪಟ್ಟಣ ಪಂಚಾಯಿತಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.