ಮಡಿಕೇರಿ, ಜು. 5: ಕೊಡಗಿನ ಪೆÇಲೀಸ್ ವರಿಷ್ಠಾಧಿಕಾರಿಗಳಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಡಾ. ಸುಮನ್ ಡಿ. ಪನ್ನೇಕರ್ ಅವರಿಗೆ ಕೊಡಗು ಬ್ಲಡ್ ಡೋನರ್ಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಎಸ್‍ಪಿ ವಸತಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಬ್ಲಡ್ ಡೋನರ್ಸ್ ತಂಡದ ಸದಸ್ಯ ವಿಕ್ರಂ ಜಾದೂಗರ್, ಸೇವೆಯಲ್ಲಿದ್ದ ಸಂದರ್ಭದಲ್ಲಿ ಎಸ್ ಪಿ ಅವರು ಕೊಡಗಿನ ಉಳಿವಿಗಾಗಿ ಕೈಗೊಂಡ ಕ್ರಮಗಳನ್ನು ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
ಲಾಕ್ಡೌನ್ ಸಮಯದಲ್ಲಿ ಪೆÇಲೀಸ್ ಇಲಾಖೆಯೊಡನೆ ಬ್ಲಡ್ ಡೋನರ್ಸ್ ತಂಡ ಕೈಜೋಡಿಸಿದ್ದನ್ನು ಸುಮನ್ ಅವರು ಸ್ಮರಿಸಿದರು. ಸನ್ಮಾನದ ನಂತರ ಡಾ. ಸುಮನ್ ಡಿ ಪನ್ನೇಕರ್ ಮತ್ತು ಅವರ ಕುಟುಂಬಸ್ಥರು ಹಾಗೂ ಬ್ಲಡ್ ಡೋನರ್ಸ್ ತಂಡದ ಸದಸ್ಯರ ಸಮ್ಮುಖದಲ್ಲಿ, ವಿಕ್ರಂ ಜಾದೂಗರ್ ಅವರಿಂದ ಜಾದೂ ಪ್ರದರ್ಶನ ನಡೆಯಿತು.
ಈ ಸರಳ ಕಾರ್ಯಕ್ರಮದಲ್ಲಿ ನಿರ್ಗಮಿತ ವರಿಷ್ಠಾಧಿಕಾರಿಗಳು ಹಾಗೂ ಕುಟುಂಬಸ್ಥರು, ಕೊಡಗು ಬ್ಲಡ್ ಡೋನರ್ಸ್ ತಂಡದ ಅಧ್ಯಕ್ಷ ವಿನು ಹೆಚ್.ಆರ್., ನಿರ್ದೇಶಕರಾದ ಮನ್ಸೂರ್ ಫರ್ಝ್, ವಿಕ್ರಂ ಜಾದೂಗರ್ ಹಾಗೂ ಸಂಘಟನಾ ಕಾರ್ಯದರ್ಶಿ ಸಮೀರ್ ಹಾಜರಿದ್ದರು.