ಸಿದ್ದಾಪುರ, ಜು. 5: ನೆಲ್ಲಿಹುದಿಕೇರಿ ಭಾಗದಲ್ಲಿ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ನಿರ್ಬಂಧಿತ ಪ್ರದೇಶದಲ್ಲಿರುವ ನೂರಾರು ಮನೆಗಳಿಗೆ ಸಿದ್ದಾಪುರ ಸಮೀಪದ ಮಟ್ಟ ನಿವಾಸಿ ಮುಸ್ತಫ ಎಂಬವರಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಯಿತು.

ಸಿದ್ದಾಪುರದ ಸಂಗೀತ ಕಾಫಿ ವಕ್ರ್ಸ್ ಮಾಲೀಕರಾದ ಹಸೈನಾರ್ ಅವರಿಂದ ನೂರಾರು ಕುಟುಂಬಗಳಿಗೆ ಉಚಿತ ತರಕಾರಿ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯ, ಸದಸ್ಯರುಗಳಾದ ಹನೀಫ್, ಮರಿಯಾ, ಅನ್ನಮ್ಮ ಹಾಗೂ ಇತರರು ಹಾಜರಿದ್ದರು.