ಕಡಂಗ, ಜು. 5: ಕೊಡಗುಸಹಕಾರ ಸಂಘಗಳ ನಿಬಂಧಕರ ಕೋರಿಕೆ ಮೇರೆಗೆ ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನಲ್ಲಿ ಕೊರೊನಾ ಸಂದರ್ಭದಲ್ಲಿ ಶ್ರಮವಹಿಸಿದ ಆಶಾ ಕಾರ್ಯಕರ್ತೆರಿಗೆ ಮತ್ತು ದಾದಿಯರಿಗೆ ಪೆÇ್ರೀತ್ಸಾಹಧನ ಮತ್ತು ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಆಶಾ ಕಾರ್ಯಕರ್ತೆರಾದ ಕೆ.ಯು. ಜಮುನಾ, ಬಿ.ಜೆ. ಪುಷ್ಪಲತಾ, ಬಿ.ಯು. ಸುಮಿತ್ರ, ದಾದಿಯರಾದ ಕೆ.ಪಿ. ರೋಹಿಣಿ ಮತ್ತು ಕೆ.ಪಿ. ಕನಕಾವತಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಬಿದ್ದಪ್ಪ, ನಿರ್ದೇಶಕರುಗಳಾದ ಕೆ.ಎಂ. ನಾಣಯ್ಯ, ಪಿ.ಎಸ್. ಅಯ್ಯಪ್ಪ, ಎನ್.ಎ. ಕಾವೇರಪ್ಪ, ಪಿ. ಪಿ. ಕಿಶನ್, ಕೆ.ಕೆ. ಉತ್ತಪ್ಪ, ಕೆ.ಯು. ಗಿರೀಶ್, ಐ.ಕೆ. ಆರತಿ, ಎಂ.ಎ. ಸೋಮಯ್ಯ, ಬ್ಯಾಂಕ್ ಸಿಬ್ಬಂದಿ ಸೋನಿಯಾ ಮತ್ತು ಬೋಪಣ್ಣ ಉಪಸ್ಥಿತರಿದ್ದರು. ವಿನೋದ್ ನಾಣಯ್ಯ ಸ್ವಾಗತಿಸಿ, ವಂದಿಸಿದರು.