ಶನಿವಾರಸಂತೆ, ಜು. 4: ಶನಿವಾರಸಂತೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ನೂತನ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಈಗಾಗಲೇ ಸರಕಾರದಿಂದ ಅನುದಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಂತೆ ಮಾರುಕಟ್ಟೆ ಹಿಂಭಾಗದ ಜಾಗದಲ್ಲಿ ಭವನ ನಿರ್ಮಾಣ ಕಾಮಗಾರಿಗಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು. ಜಿ.ಪಂ. ಮುಖ್ಯ ಇಂಜಿನಿಯರ್ ವೀರೇಂದ್ರ ಮತ್ತು ಶನಿವಾರಸಂತೆ ವಿಭಾಗದ ಜಿ.ಪಂ. ಇಂಜಿನಿಯರ್ ಸಲೀಂ, ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಶನಿವಾರಸಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಹೆಚ್. ಮಹಮದ್‍ಗೌಸ್, ಮಾಜಿ ಸದಸ್ಯರು ಗಳಾದ ಸರ್ದಾರ್ ಅಹಮದ್, ಹರೀಶ್, ಲೆಕ್ಕ ಸಹಾಯಕ ವಸಂತ್ ಹಾಜರಿದ್ದರು.