*ಗೋಣಿಕೊಪ್ಪಲು, ಜು. 4: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ತಾಲೂಕು ಯುವ ಮೋರ್ಚಾದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಗೋಣಿಕೊಪ್ಪಲು ಸಮಿತಿ ಕಚೇರಿಯಲ್ಲಿ ನಡೆಯಿತು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮುಂದಿನ ಅವಧಿಯವರೆಗೆ ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಸಿ. ಭರತ್, ಉಪಾಧ್ಯಕ್ಷರಾಗಿ ಬೊಳ್ಕಾರಂಡ ಗಗನ್ ಗಣಪತಿ ಮತ್ತು ಪಟ್ರಂಗಡ ಪೆÇನ್ನಣ್ಣ ರಂಜನ್, ಕೋಶಾಧಿಕಾರಿಯಾಗಿ ಬಲ್ಲಚಂಡ ಮೋನಿಷ್ ಮೊಣ್ಣಪ್ಪ, ಕಾರ್ಯದರ್ಶಿಯಾಗಿ ಮಚ್ಚಮಾಡ ಎಂ. ತಿಮ್ಮಯ್ಯ, ಸಹಕಾರ್ಯದರ್ಶಿಗಳಾಗಿ ಕೆ.ಆರ್. ರಕ್ಷಕ್ ಕುಮಾರ್, ಸದಸ್ಯರಾಗಿ ತೀತಿರ ಸ್ವರಾಜ್ ಕುಟ್ಟಪ್ಪ, ಮುಲ್ಲೇಂಗಡ ಪ್ರದಾನ್ ಬೊಪಣ್ಣ, ಬಿ.ಎಂ. ಬೆಳ್ಯಪ್ಪ, ಎಸ್.ಸಿ. ಮಣಿಕಂಠ, ಮುಳುವಂಡ ಕಲನ್ ಚಿಟ್ಟಿಯಪ್ಪ, ತಾತಂಡ ಬಿಪಿನ್ ಮುತ್ತಪ್ಪ, ಕರ್ತಚ್ಚೀರ ಎ. ಡ್ಯಾನಿ, ಕುಪ್ಪಣಮಾಡ ರಾಬಿನ್ ಸೋಮಣ್ಣ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅವರು ಸಭೆಯಲ್ಲಿ ಮಾಹಿತಿ ನೀಡಿದರು.