ಸಂಪಾಜೆ, ಜು. 3: ಸಂಪಾಜೆ ಅರಮನೆತೋಟ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಈ ಹಿಂದೆ ಲಾಕ್‍ಡೌನ್ ನಿಷೇಧಾಜ್ಞೆಯಿಂದಾಗಿ ಮೇ 10 ಮತ್ತು ಮೇ 11 ರಂದು ವಷರ್ಂಪ್ರತಿ ನಡೆಯಬೇಕಾಗಿದ್ದ ಕಾಲಾವಧಿ ಒತ್ತೆಕೋಲ ಉತ್ಸವ ನಡೆಸಲು ಸಾಧ್ಯವಾಗಲಿಲ್ಲದ್ದರಿಂದ ದೈವಜ್ಞರ ಸಲಹೆಯಂತೆ ತಂಬಿಲ ಕಾರ್ಯಕ್ರಮವನ್ನು ತಾ.2ರಂದು ಶಾಸ್ತ್ರಬದ್ಧವಾಗಿ ದೇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಈ ಸಂದರ್ಭ ಊರಿನ ಹಿರಿಯರಾದ ಕಳಗಿ ವೆಂಕಪ್ಪ, ಓ.ಆರ್. ಮಾಯಿಲಪ್ಪ, ಐತ ಅರಮನೆತೋಟ, ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜಾರಾಮ್ ಕಳಗಿ , ಬಿ.ಎನ್.ತಿಮ್ಮಪ್ಪ, ಕೋಡಿ ಲಕ್ಷ್ಮಣ, ಮರಿಕೆ ರಮಾನಾಥ, ಮರಿಕೆ, ತೀರ್ಥಪ್ರಸಾದ್ ಬಾಳಕಜೆ, ಮುರುಳಿಕಿಶೋರ್, ಮಹಾವಿಷ್ಣು ಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ, ಅಧ್ಯಕ್ಷ ಕೊರಗಪ್ಪ ಅರಮನೆತೋಟ, ಕಾರ್ಯದರ್ಶಿ ಕೃಷ್ಣ ಅರಮನೆತೋಟ, ಶೇಖರ, ಪಕ್ಕಿರ, ನಾರಾಯಣ, ಲೋಕೇಶ್, ನಾರಾಯಣ, ವರುಣ್ ಆಚಾರ್ಯ, ಮೋಹಿತ್ ಹೊದ್ದೆಟ್ಟಿ, ಹೇಮಂತ್ ಕುಂಬಾಡಿ, ಆದರ್ಶ ಅಳಿಕೆ, ತೀರ್ಥಪ್ರಸಾದ್ ಬಾಳಕಜೆ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ದೇವರ ಸಾನಿಧ್ಯಕ್ಕೆ ಬಂಧು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.