ಮಡಿಕೇರಿ, ಜು. 2: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2018-19 ನೇ ಸಾಲಿನ ದ್ವಿತೀಯ ವರ್ಷದ ಬಿ.ಎ, ಬಿ.ಕಾಂ ಮತ್ತು 2019-20 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತಿ ಹಾಗೂ 2019-20 ಜನವರಿ ಆವೃತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಲಿಬ್, ಐಎಸ್‍ಸಿ, ಎಂಎ, ಎಂ.ಕಾಂ, ಎಂ.ಎಸ್‍ಸಿ, ಎಂ.ಬಿಎ, ಎಂ.ಲಿಬ್ ಐಎಸ್‍ಸಿ, ಬಿ.ಇಡಿ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ತರಗತಿಗಳನ್ನು ಕೋವಿಡ್-19 ರ ಕಾರಣದಿಂದಾಗಿ ಭೌತಿಕವಾಗಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಏSಔU ಅoಟಿಟಿeಛಿಣ ಠಿಟಚಿಣಜಿoಡಿm ನ ಮುಖಾಂತರ ಆನ್‍ಲೈನ್ ತರಗತಿಗಳು ಜುಲೈ 3 ರಿಂದ 14 ರವರೆಗೆ ನಡೆಯಲಿದೆ.

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ವೆಬ್‍ಲಿಂಕ್‍ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳು ಇ-ಡಿಜಿಟಲ್ ಪ್ರಮಾಣಪತ್ರಗಳನ್ನು ಆನ್‍ಲೈನ್ ಮೂಲಕ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜನಾಧಿಕಾರಿ ಮೊ.ಸಂ. 9611434810 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.