ಕಣಿವೆ, ಜು. 2: ಕಳೆದ ಒಂದು ತಿಂಗಳಿಂದ ಮಳೆಯಾಗದೇ ಒಣಗುತಿದ್ದ ಜೋಳದ ಬೆಳೆಗೆ ಕೊನೆಗೂ ವರುಣ ದೇವ ಜೀವ ಕಳೆ ನೀಡಿದ್ದಾನೆ. ಆರಿದ್ರಾ ಮಳೆ ತನ್ನ ಕೊನೆಯ ಅವಧಿಯ ಮೂರು ದಿನದ ಮೊದಲು ಸುರಿದಿದ್ದು ಭೂಮಿ ತಂಪಾಗಿದೆ.

ಗುರುವಾರ ಬೆಳಗ್ಗೆಯಿಂದ ಕುಶಾಲನಗರ ಹೋಬಳಿಯಾದ್ಯಂತ ಉತ್ತಮ ಮಳೆಯಾದ ಕಾರಣ ಅರೆ ನೀರಾವರಿ ಪ್ರದೇಶದಲ್ಲಿ ಮಳೆಯ ನೀರಿಗಾಗಿ ಬಾಯ್ತೆರೆದು ಕಾದಿದ್ದ ಜೋಳ, ಶುಂಠಿ, ಕ್ಯಾನೆ ಮೊದಲಾದ ದ್ವಿದಳ ಧಾನ್ಯಗಳ ಬೆಳೆಗಳಿಗೆ ಜೀವ ಬಂದಂತಾಗಿದೆ. ಇದರಿಂದ ರೈತಾಪಿಗಳಿಗೆ ಹರ್ಷ ಉಂಟಾಗಿದೆ.