ಮಡಿಕೇರಿ, ಜು. 2: ವೀರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದ ವ್ಯಕ್ತಿ ಯೊಬ್ಬರು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಟ್ಟೆನೋವಿನಿಂದ ಜೂನ್ 28 ರಂದು ಚಿಕಿತ್ಸೆಗೆ ತೆರಳಿದ್ದು, ಕರ್ತವ್ಯದಲ್ಲಿದ್ದ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ಕಳುಹಿಸಿದ್ದು, ಸ್ಕ್ಯಾನಿಂಗ್ ಬಳಿಕ ಆಸ್ಪತ್ರೆಗೆ ವಾಪಾಸ್ ಬಂದಾಗ ವ್ಯಕ್ತಿಯು ಮೃತಪಟ್ಟಿದ್ದರು.

ಈ ವ್ಯಕ್ತಿಗೆ ಸಾರ್ವಜನಿಕ ಆಸ್ಪತ್ರೆ ವೀರಾಜಪೇಟೆಯ ದಾಖಲಾತಿಯ ಪ್ರಕಾರ ಹಾಗೂ ಕುಟುಂಬದ ಹೇಳಿಕೆಯ ಪ್ರಕಾರ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ದಾಖಲಾತಿಯ ಪ್ರಕಾರ ಈ ವ್ಯಕ್ತಿ ತೀವ್ರ ಹೃದಯಾಘಾತ ಹಾಗೂ ಅಕ್ಯೂಟ್ ಪಾನ್‍ಕ್ರಿಯೇಟಿಟಿಸ್‍ನಿಂದ ಸಾವನ್ನಪ್ಪಿದ್ದಾರೆ.

ಕೂರ್ಗ್ ಡಯಾಗ್ನೋಸಿಸ್ ಸೆಂಟರ್ ವೀರಾಜಪೇಟೆ ಇಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಗಂಟಲು ಹಾಗೂ ಮೂಗಿನ ದ್ರವದ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದ್ದು, ವರದಿಯು ನೆಗೆಟಿವ್ ಆಗಿರುತ್ತದೆ ಎಂದು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.