ಕೂಡಿಗೆ, ಜು. 2: ಜಿಲ್ಲೆಯಲ್ಲಿ ಈ ಬಾರಿ ರೈತರು ವಾಣಿಜ್ಯ ಬೆಳೆಯಾದ ಶುಂಠಿಹೆಚ್ಚು ಬೆಳೆದಿದ್ದಾರೆ. ಶುಂಠಿಯನ್ನು ಭೂಮಿ ಹದ ಮಾಡಿ ಕಳೆದ ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಶುಂಠಿ ಬೆಳೆಗೆ ಈಗಾಗಲೇ ವಿವಿಧ ರೋಗಗಳು ಕಾಣಿಸಿಕೊಂಡು ಜಮೀನಿನಲ್ಲಿ ಹಾಳಾಗುತ್ತಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಅನೇಕ ರೈತರು ಬಿತ್ತನೆ ಮಾಡಿ ಐದು ತಿಂಗಳುಗಳು ಮಾತ್ರವೇ ಕಳೆದಿದ್ದು, ರೋಗ ಹೆಚ್ಚುತ್ತಿರುವುದರಿಂದಾಗಿ ಶುಂಠಿ ಬೆಳೆಯನ್ನು ಕೀಳಲಾರಂಭಿಸಿದ್ದಾರೆ.