ಕೂಡಿಗೆ, ಜು. 1: ಕೂಡಿಗೆ ವಿಭಾಗದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಘಟಕದ ಕೂಡಿಗೆ ವಿಭಾಗದ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಸೇವೆಯಿಂದ ನಿವೃತ್ತಿಯಾದ ಇಂಜಿನಿಯರ್ ಕೆ. ಬಸವರಾಜ್ ಅವರಿಗೆ ಕೂಡಿಗೆ ವಿಭಾಗದ ನೌಕರರು ಸನ್ಮಾನಿಸಿ, ಗೌರವಿಸಿ ಬೀಳ್ಕೊಟ್ಟರು.

ಈ ಸಂದರ್ಭ ಡಿ.ಜೆ. ರೇಣುಕುಮಾರ, ಬಿದ್ದಪ್ಪ, ಕೆ.ಜೆ. ಮಹೇಶ್, ಆರ್. ವೆಂಕಟೇಶ, ಕೆ.ಎಸ್. ವೆಂಕಟೇಶ, ಮಂಜೆಗೌಡ, ಸಹ ಸಿಬ್ಬಂದಿಗಳು ಹಾಜರಿದ್ದರು.