ಕಡಂಗ, ಜು. 1: ಕೊಡಗು ಸಹಕಾರ ಸಂಘಗಳ ನಿಬಂಧಕರು ಮಡಿಕೇರಿ ಇವರ ಕೋರಿಕೆ ಮೇರೆಗೆ ಕಡಂಗ ಸಮೀಪದ ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಕೊರೊನಾ ಸಂದರ್ಭ ಗ್ರಾಮದಲ್ಲಿ ಹಗಲಿರುಳು ಶ್ರಮವಹಿಸಿದ ಆಶಾ ಕಾರ್ಯಕರ್ತರಿಗೆ ಪೆÇ್ರೀತ್ಸಾಹಧನ ನೀಡಿ ಸನ್ಮಾನಿಸಲಾಯಿತು.
ಬೆಳ್ಳುಮಾಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾತಂಡ ಸಿ. ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಸಹಕಾರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾಕೋಟು ಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸ್ನೇಹ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ರೋಗವನ್ನು ಯಾವ ರೀತಿ ನಿಯಂತ್ರಿಸಬೇಕು ಮತ್ತು ತಡೆಗಟ್ಟಬೇಕು ಎಂದು ಸ್ಪಷ್ಟÀ್ಟವಾಗಿ ಮಾಹಿತಿ ನೀಡಿದರು. ಈ ಸಂದರ್ಭ ಬೆಳ್ಳುಮಾಡು ಆರೋಗ್ಯ ಉಪಕೇಂದ್ರದ ಸಹಾಯಕಿ ಕೆ.ಕೆ. ರೇಣು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರಾದ ಶಾಂತಿ, ತಾರಾ, ಹೇಮಾವತಿ ವಿ.ಆರ್. ಅವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಕೆ.ಎಂ. ಅರ್ಜುನ, ಮೊನ್ನಪ್ಪ ಪೂವಯ್ಯ ಸಿ.ಎಸ್., ಪೂವಯ್ಯ ಎಂ.ಪಿ., ಅಪ್ಪಯ್ಯ ಕೆ.ಕೆ., ಅಚ್ಚಯ್ಯ ಕೆ.ಜಿ., ಚಿತ್ರ ಕೆ.ಟಿ., ಶೀಲಾವತಿ ಸಿ.ಎ. ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಬ್ಯಾಂಕ್ ಸಿಬ್ಬಂದಿ ಕುಶಾಲಪ್ಪ ಹಾಗೂ ವಂದನಾರ್ಪಣೆಯನ್ನು ಉಪಾಧ್ಯಕ್ಷ ಕೆ.ಎಂ. ಅರ್ಜುನ ನಡೆಸಿಕೊಟ್ಟರು.
- ನೌಫಲ್.