ಗೋಣಿಕೊಪ್ಪ ವರದಿ, ಜೂ. 30 : ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ವಿರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೋಣಿಕೊಪ್ಪದಲ್ಲಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಣೆ ಮಾಡಿ ಸಲಹೆ ನೀಡಲಾಯಿತು. ಈ ಸಂದರ್ಭ ಸುಮಾರು 500 ಮಾಸ್ಕ್ ವಿತರಿಸಲಾಯಿತು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ವೀರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಚೀರ ಕವಿತಾ ಬೋಜಪ್ಪ, ಪ್ರ. ಕಾರ್ಯದರ್ಶಿ ರತಿ ಅಚ್ಚಪ್ಪ, ಕಾರ್ಯದರ್ಶಿ ಸುಳ್ಳಿಮಾಡ ಶಿಲ್ಪ, ಪ್ರಮುಖರಾದ ಸುಮಿ ಸುಬ್ಬಯ್ಯ, ರಾಣಿ ನಾರಾಯಣ ಇದ್ದರು.