ಮಡಿಕೇರಿ, ಜೂ. 30: ನಾಗರಿಕರ ವೇದಿಕೆ ವತಿಯಿಂದ ತಾ. 2ರಂದು ಕೊರೊನಾ ವಾರಿಯರ್ಸ್‍ಗೆ ಸತ್ಕಾರಕೂಟ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆಯಲಿದೆ. ಕೊರೊನಾ ವಾರಿಯರ್ಸ್‍ಗಳಾದ ಎಲ್ಲಾ ಸರ್ಕಾರಿ ನೌಕರರು ಮತ್ತು ಸಮಾಜ ಸೇವಕರು ಆಗಮಿಸಿ ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಲು ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಕೋರಿದ್ದಾರೆ.